ಕತ್ತಲಲ್ಲಿ ಕಪ್ಪು ಕರಡಿ: ಗ್ರಾಮದೊಳಗೆ ಇವುಗಳ ಸಂಚಾರ ನೋಡಿ

ರಾತ್ರೋ ರಾತ್ರಿ ಗ್ರಾಮದೊಳಗೆ ಪ್ರವೇಶಿಸಿದ ಕರಡಿಗಳು ಗ್ರಾಮದ ಬೀದಿಗಳಲ್ಲಿ ರಾಜಾರೋಷವಾಗಿ ಸಂಚರಿಸುತ್ತಿವೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಐಡಿಹಳ್ಳಿ ಗರಣಿ ಗ್ರಾಮದಲ್ಲಿ ಕರಡಿಗಳು ಆರಾಮವಾಗಿ ಸಂಚರಿಸುತ್ತಿವೆ.

First Published Jan 31, 2020, 12:40 PM IST | Last Updated Jan 31, 2020, 12:45 PM IST

ತುಮಕೂರು(ಜ.31): ರಾತ್ರೋ ರಾತ್ರಿ ಗ್ರಾಮದೊಳಗೆ ಪ್ರವೇಶಿಸಿದ ಕರಡಿಗಳು ಗ್ರಾಮದ ಬೀದಿಗಳಲ್ಲಿ ರಾಜಾರೋಷವಾಗಿ ಸಂಚರಿಸುತ್ತಿವೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಐಡಿಹಳ್ಳಿ ಗರಣಿ ಗ್ರಾಮದಲ್ಲಿ ಕರಡಿಗಳು ಆರಾಮವಾಗಿ ಸಂಚರಿಸುತ್ತಿವೆ.

ಅಧಿಕಾರ ಸಿಕ್ಕಿತೆಂದು ದರ್ಬಾರ್‌ ಮಾಡ್ಬೇಡಿ: ಮಹಿಳಾ ಮೇಯರ್‌ಗೆ ಸಂಸದ ಕಿವಿಮಾತು

ಜನಗಳು ಸಿಕ್ಕರೆ ದಾಳಿ ನಡೆಸುವ ಕರಡಿಗಳು ಗ್ರಾಮದೊಳಗೇ ಓಡಾಡುವುದರಿಂದ ಜನ ಮನೆಯಿಂದ ಹೊರ ಬರಲು ಭಯಪಡುತ್ತಿದ್ದಾರೆ. ಗ್ರಾಮದಲ್ಲಿ ಭೀತಿಯ ವಾತಾವರಣ ಹೆಚ್ಚಾಗಿದ್ದು, ಸಂಜೆಯಾದರೆ ಸಾಕು ಮನೆಯಿಂದ ಹೊರಬರಲು ಜನ ಹೆದರುತ್ತಿದ್ದಾರೆ.

ಗ್ರಾಮದ ಯುವಕರು ಮನೆಯ ತಾರಸಿಯ ಮೇಲೆ ನಿಂತು ಕರಡಿ ಆಗಮಿಸುವ ದೃಶ್ಯ ಸೆರೆ ಹಿಡಿದಿದ್ದಾರೆ. ದೃಶ್ಯದಲ್ಲಿ ಕರಡಿಗಳು ರಸ್ತೆಯಲ್ಲಿ ಆರಾಮವಾಗಿ ಓಡಾಡುತ್ತಿರುವುದು ಕಂಡು ಬಂದಿದೆ.