land Encroachment in Bengaluru : ರಾಜಕಾಲುವೆ ಮೇಲಿನ ಎಲ್ಲಾ ಕಟ್ಟಡಗಳು ತೆರವು
ಬೆಂಗಳೂರಿನಲ್ಲಿ ಮತ್ತೆ ಜೆಸಿಬಿಗಳು ಆರ್ಭಟಿಸಲಿವೆ. ರಾಜಕಾಲುವೆ ಮೇಲೆ ಕಟ್ಟಿರುವ ಮನೆ ಕೆಡವುವ ಕಾರ್ಯಕ್ಕೆ ಸಜ್ಜಾಗಲಾಗಿದೆ. ಬೆಂಗಳೂರಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಅನೇಕ ರೀತಿಯಲ್ಲಿ ಅನಾಹುತಗಳಾಗುತ್ತಲೇ ಇದೆ. ಇಂತಹ ಮಳೆ ಅನಾಹುತಗಳನ್ನು ತಡೆಯಲು ಒತ್ತುವರಿ ಕಾರ್ಯ ನಡೆಯಲಿದೆ. ಬಿಬಿಎಂಪಿ ರಾಜಕಾಲುವೆ ಮೇಲೆ ಕಟ್ಟಲಾದ ಕಟ್ಟಗಳನ್ನು ತೆರವು ಮಾಡಲಿದೆ.
ಬೆಂಗಳೂರು (ನ.25): ಬೆಂಗಳೂರಿನಲ್ಲಿ (Bengaluru) ಮತ್ತೆ ಜೆಸಿಬಿಗಳು (JCB) ಆರ್ಭಟಿಸಲಿವೆ. ರಾಜಕಾಲುವೆ ಮೇಲೆ ಕಟ್ಟಿರುವ ಮನೆ ಕೆಡವುವ ಕಾರ್ಯಕ್ಕೆ ಸಜ್ಜಾಗಲಾಗಿದೆ. ಬೆಂಗಳೂರಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು (Rain) ಅನೇಕ ರೀತಿಯಲ್ಲಿ ಅನಾಹುತಗಳಾಗುತ್ತಲೇ ಇದೆ. ಇಂತಹ ಮಳೆ ಅನಾಹುತಗಳನ್ನು ತಡೆಯಲು ಒತ್ತುವರಿ ಕಾರ್ಯ ನಡೆಯಲಿದೆ. ಬಿಬಿಎಂಪಿ (BBMP) ರಾಜಕಾಲುವೆ ಮೇಲೆ ಕಟ್ಟಲಾದ ಕಟ್ಟಗಳನ್ನು ತೆರವು ಮಾಡಲಿದೆ.
BBMP ಮುಖ್ಯ ಆಯುಕ್ತರನ್ನೇ ಜೈಲಿಗೆ ಕಳಿಸ್ತೀವಿ: ಹೈಕೋರ್ಟ್ ಕೆಂಡಾಮಂಡಲ
ಒತ್ತುವರಿ ತೆರವು ಕಾರ್ಯ ನಡೆಸಲು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಅವರು ಆದೇಶ ನೀಡಿದ್ದು ಶೀಘ್ರ ಕಾರ್ಯಾರಂಭವಾಗಲಿದ್ದು, ಬಿಬಿಎಂಪಿ ಒತ್ತುವರಿ ವರದಿಯನ್ನು ಕೈಗೆತ್ತಿಕೊಂಡಿದೆ. ಈ ಹಿಂದೆ ನಾನಾ ಒತ್ತಡಗಳಿಂದ ನಿಂತಿದ್ದ ಒತ್ತುವರಿ ತೆರವು ಕಾರ್ಯ ಇದೀಗ ಪುನರಾರಂಭವಾಗಲಿದೆ. ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ 1953 ರಾಜಕಾಲುವೆ ಒತ್ತುವರಿ ಕೇಸ್‌ಗಳಿಂದ ಮತ್ತೆ ಜೆಸಿಬಿಗಳ ಸದ್ದು ಶುರುವಾಗಲಿದೆ.