ಡ್ರಗ್‌ ಇನ್ಸ್‌ಪೆಕ್ಟರ್‌ಗಳು ಹುದ್ದೆಯಲ್ಲಿಲ್ಲ, ಬಾಣಂತಿಯರ ಸಾವಿಗೆ ಕೊನೆಯಿಲ್ಲ!

ಕರ್ನಾಟಕದಲ್ಲಿ ಬಾಣಂತಿಯರ ಸಾವಿನ ಹಿಂದೆ ಔಷಧ ಸುರಕ್ಷತೆಯಲ್ಲಿ ಸರ್ಕಾರದ ನಿರ್ಲಕ್ಷ್ಯ ಕಂಡುಬಂದಿದೆ. ರಾಜ್ಯದಲ್ಲಿ 102 ಡ್ರಗ್ ಇನ್ಸ್‌ಪೆಕ್ಟರ್‌ಗಳ ಹುದ್ದೆಗಳು ಖಾಲಿ ಇದ್ದು, ಔಷಧಿಗಳ ಗುಣಮಟ್ಟ ಪರಿಶೀಲನೆಗೆ ಸಿಬ್ಬಂದಿ ಕೊರತೆ ಎದುರಾಗಿದೆ. 2021ರಲ್ಲಿ ನೇಮಕಗೊಂಡ 83 ಡ್ರಗ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ.

First Published Dec 7, 2024, 6:34 PM IST | Last Updated Dec 7, 2024, 6:35 PM IST

ಬೆಂಗಳೂರು (ಡಿ.7): ರಾಜ್ಯದಲ್ಲಿ ಸಾಲು ಸಾಲು ಬಾಣಂತಿಯರು ಸಾವು ಕಾಣುತ್ತಿದ್ದಾರೆ. ಇದರಲ್ಲಿ ಸರ್ಕಾರದ ಮಟ್ಟದಲ್ಲಿಯೇ ದೊಡ್ಡ ತಪ್ಪಾಗಿರುವುದೂ ಗೊತ್ತಾಗಿದೆ. ಔಷಧ ಸುರಕ್ಷತೆ ವಿಚಾರದಲ್ಲಿ ಸರ್ಕಾರದ ತೀವ್ರ ನಿರ್ಲಕ್ಷ್ಯ ಡ್ರಗ್‌ ಇನ್ಸ್‌ಪೆಕ್ಟರ್‌ಗಳ ವಿಚಾರದಲ್ಲೂ ಬಯಲಾಗಿದೆ.

ರಾಜ್ಯಕ್ಕೆ ಬರುವ ಡ್ರಗ್‌ಗಳ ಮೇಲ್ವಿಚಾರಣೆ ಮಾಡುವ ಡ್ರಗ್‌ ಇನ್ಸ್‌ಪೆಕ್ಟರ್‌ಗಳ ಹುದ್ದೆಯಲ್ಲೂ ಸರ್ಕಾರ ನಿರ್ಲಕ್ಷ್ಯ ತೋರಿದೆ. 113 ಡ್ರಗ್‌ ಇನ್ಸ್‌ಪೆಕ್ಟರ್‌ಗಳು ರಾಜ್ಯದಲ್ಲಿ ಇರಬೇಕು. ಆದರೆ,ಪ್ರಸ್ತುತ ಬರೀ 11 ಮಂದಿ ಮಾತ್ರವೇ ಕೆಲಸ ಮಾಡುತ್ತಿದ್ದಾರೆ.

ಅಮ್ಯೂಸ್‌ಮೆಂಟ್ ಪಾರ್ಕ್‌ನ ಫನ್‌ ರೈಡ್‌ ವೇಳೆ ಮಗನ ಸಾವು, ಪೋಷಕರಿಗೆ ಸಿಕ್ತು 2624 ಕೋಟಿ ಪರಿಹಾರ!

ರಾಜ್ಯದಲ್ಲಿ ಇನ್ನೂ 102 ಡ್ರಗ್‌ ಇನ್ಸ್‌ಪೆಕ್ಟರ್‌ಗಳ ಹುದ್ದೆ ಖಾಲಿ ಇದೆ. ಇದಕ್ಕೆ ಜನರ ನೇಮಕ ಮಾಡುವ ಉತ್ಸಾಹವೇ ಸರ್ಕಾರಕ್ಕೆ ಇದ್ದಂತಿಲ್ಲ. ಡ್ರಗ್‌ ಇನ್ಸ್‌ಪೆಕ್ಟರ್‌ಗಳೇ ಇಲ್ಲದೆ ರಾಜ್ಯದಲ್ಲಿ ಆಸ್ಪತ್ರೆಗಳು ನಡೆಯುತ್ತಿವೆ. ಬಂದಿರುವ ಔಷಧಿಗಳು ಕಳಪೆಯೋ, ಇಲ್ಲವೋ ಅನ್ನೋದನ್ನ ಪರಿಶೀಲನೆ ಮಾಡೋರೇ ಇಲ್ಲದಂತಾಗಿದೆ. 2021ರಲ್ಲಿ 83 ಡ್ರಗ್ ಇನ್ಸ್‌ಪೆಕ್ಟರ್‌ಅನ್ನು ಕೊನೆಯ ಬಾರಿಗೆ ನೇಮಕ ಮಾಡಲಾಗಿತ್ತು. ನೇಮಕ ಪ್ರಶ್ನಿಸಿ ಕೆಲ ಅಭ್ಯರ್ಥಿಗಳು ಹೈಕೋರ್ಟ್ ‌ಮೊರೆ ಹೋಗಿದ್ದರು.