Asianet Suvarna News Asianet Suvarna News

Yadgir| ಸಚಿವ ಶ್ರೀರಾಮುಲುಗೆ ಶಾಕ್‌ ಕೊಟ್ಟ ಚಿಂಚನಸೂರ್‌..!

Oct 9, 2021, 3:39 PM IST

ಯಾದಗಿರಿ(ಅ.09): ಏಕಲವ್ಯ ವಸತಿ ಶಾಲೆ ಉದ್ಘಾಟನೆಗೆ ಬಂದಿದ್ದ ಸಚಿವ ಬಿ. ಶ್ರೀರಾಮುಲು ಅವರಿಗೆ ಬಾಬುರಾವ್‌ ಚಿಂಚನಸೂರ್‌ ಶಾಕ್‌ ಕೊಟ್ಟ ಘಟನೆ ತಾಲೂಕಿನ ಬಂದಳ್ಳಿ ಹೊರವಲಯದ ಬಳಿ ಇಂದು(ಶುಕ್ರವಾರ) ನಡೆದಿದೆ. ಶ್ರೀರಾಮುಲು ಕಾರನ್ನು ಬಾಬುರಾವ್‌ ಚಿಂಚನಸೂರ್‌ ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ತಮಗೆ ಆಹ್ವಾನ ನೀಡದ ಜಿಲ್ಲಾಡಳಿತದ ವಿರುದ್ಧ ಬಾಬುರಾವ್‌ ಚಿಂಚನಸೂರ್‌ ಅವರು ಆಕ್ರೋಶವನ್ನ ಹೊರಹಾಕಿದ್ದಾರೆ. ಹೀಗಾಗಿ ಸಚಿವ ಶ್ರೀರಾಮುಲು ಅವರನ್ನ ಕಾರ್ಯಕ್ರಮಕ್ಕೆ ತೆರಳಲು ಬಾಬುರಾವ್‌ ಚಿಂಚನಸೂರ್‌ ಬಿಟ್ಟಿಲ್ಲ. ಹೀಗಾಗಿ ಕಾರ್ಯಕ್ರಮವನ್ನ ರದ್ದು ಮಾಡಿದ ಯಾದಗಿರಿಗೆ ತೆರಳಿದ್ದಾರೆ ಶ್ರೀರಾಮುಲು. 

 ರಾಯಚೂರಲ್ಲಿ ಭಾರೀ ಮಳೆ: ಬಾಯಲ್ಲಿ ಮರಿ ಹಿಡಿದು ನಾಯಿ ಪರದಾಟ

Video Top Stories