Ballari: ಹಿಂದೂ‌-ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾದ ಬಳ್ಳಾರಿ: ಅಯ್ಯಪ್ಪಸ್ವಾಮಿ ಪೂಜೆ ಆಯೋಜಿಸಿದ ನೂರ್ ಮೊಹಮ್ಮದ್

ಬಳ್ಳಾರಿ ಹಿಂದೂ‌-ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದು, ಅಯ್ಯಪ್ಪ ಸ್ವಾಮಿ‌ ಪೂಜೆ ಮಾಡುವ ಮೂಲಕ ಪಾಲಿಕೆ ಸದಸ್ಯ‌ ಸೌಹಾರ್ದತೆ ಮೆರೆದಿದ್ದಾರೆ.
 

Share this Video
  • FB
  • Linkdin
  • Whatsapp

ಬಳ್ಳಾರಿ : ದೇಶದಲ್ಲಿ ಒಂದು ಕಡೆ ಕೋಮು ದಳ್ಳುರಿ ಹಬ್ಬುತ್ತಿರುವ ಬೆನ್ನಲ್ಲೇ, ಕೋಮು ಸೌಹಾರ್ದತೆಯನ್ನು ಬೆಳೆಸುವ ಘಟನೆಗಳಿಗೂ ಕೊರತೆ ಇಲ್ಲವೆಂದು ತೋರಿಸುವ ಕೆಲಸವಾಗಿದೆ. ಬಳ್ಳಾರಿಯ 15ನೇ ವಾರ್ಡ್ ನ ಪಾಲಿಕೆ ಸದಸ್ಯ, ಕಾಂಗ್ರೆಸ್ಸಿನ ನೂರ್ ಮೊಹಮ್ಮದ್ ಅವರಿಂದ ಅಯ್ಯಪ್ಪ ಮಾಲಾಧಾರಿಗಳ ಬೃಹತ್ ಮಹಾ ಪಡಿಪೂಜೆ ಆಯೋಜನೆ ಮಾಡಲಾಗಿದೆ. ವೇದಿಕೆಯ ಮೇಲೆ ನಿರ್ಮಿಸಲಾಗಿದ್ದ 18 ಮೆಟ್ಟಿಲುಗಳ ಮೇಲೆ ಅಯ್ಯಪ್ಪ ಸ್ವಾಮಿಯ ಮಂಟಪದಲ್ಲಿ, ಪೂಜೆ ನಡೆಯಿತು. ಮಾಲಾಧಾರಿಗಳು ಸೇರಿದಂತೆ ಬಹುತೇಕ ಮುಸ್ಲಿಂ ಮುಖಂಡರು ಪೂಜೆಯಲ್ಲಿ ಭಾಗಿಯಾಗಿದ್ದರು. ಹೀಗೆ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದೆ ಬಳ್ಳಾರಿಯ ಅಯ್ಯಪ್ಪ ಸ್ವಾಮಿ ಪೂಜೆ ಕಾರ್ಯಕ್ರಮ.


Related Video