ಮಂಡ್ಯದ ದೇವಾಲಯದಲ್ಲಿ ವಿಸ್ಮಯ: ಕಳ್ಳತನ ತಪ್ಪಿಸಿದ ಸರ್ಪ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Mandya News: ಮಂಡ್ಯದ ನಾಗಮಂಗಲದ ಶ್ರೀ ಮಾಯಮ್ಮ ಮತ್ತು ಶ್ರೀ ದೈತಮ್ಮ ದೇವಾಲಯದಲ್ಲಿ ವಿಸ್ಮಯಕಾರಿ ಘಟನೆ ನಡೆದಿದೆ 

Share this Video
  • FB
  • Linkdin
  • Whatsapp

ಮಂಡ್ಯ (ನ. 11): ಮಂಡ್ಯದ (Mandya) ನಾಗಮಂಗಲ ತಾಲ್ಲೂಕು ಹುಳ್ಳೇನಹಳ್ಳಿ ಗ್ರಾಮದಲ್ಲಿರುವ ದೇಗುಲ ಶ್ರೀ ಮಾಯಮ್ಮ ಮತ್ತು ಶ್ರೀ ದೈತಮ್ಮ ದೇವಾಲಯದಲ್ಲಿ ವಿಸ್ಮಯಕಾರಿ ಘಟನೆ ನಡೆದಿದೆ. ಬೆಳಗಿನ ಜಾವ ಸುಮಾರು 2 ಗಂಟೆಗೆ ಕಳ್ಳರು ಸಿಸಿಟಿವಿ ಕ್ಯಾಮೆರಾ ಕೇಬಲ್‌ಗಳನ್ನು ಕಟ್ ಮಾಡಿ ಕಳ್ಳತನಕ್ಕೆ ಯತ್ನಿಸಿಸಿದ್ದಾರೆ. ವಿಸ್ಮಯವೆಂಬಂತೆ ದೇಗುಲದಲ್ಲಿ ಅದೇ ಸಮಯಕ್ಕೆ ಸರ್ಪ ಕಾಣಿಸಿಕೊಂಡಿದೆ. ಸರ್ಪವನ್ನು ನೋಡಿ ಕಳ್ಳತನ ಬಿಟ್ಟು ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಗ್ರಾಮಸ್ಥರು ದೂರು ದಾಖಲಿಸಿದ್ದಾರೆ.

ನರಗುಂದದಲ್ಲಿ ಅಪರೂಪದ ಕರಿನಾಗರ ಪ್ರತ್ಯಕ್ಷ!

Related Video