ಸುವರ್ಣ ಪರಿಣಾಮ; ಶಿರಸಿ ಮಾರಿಕಾಂಬಾ ದೇವಾಲಯ ಸೇವಾ ದರ ಹೆಚ್ಚಳಕ್ಕೆ ಬ್ರೇಕ್!

* ಶಿರಸಿ ಮಾರಿಕಾಂಬಾ ದೇಗುಲದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳ ದರ ದುಬಾರಿ
*  ಪಲ್ಲಕ್ಕಿ ಸೇವೆ 650 ರೂಪಾಯಿಯಿಂದ 5,000 ಕ್ಕೆ ಏರಿಕೆಯಾಗಿತ್ತು
* ಸುವರ್ಣ ನ್ಯೂಸ್ ವರದಿ ಬಳಿಕ ದರ ಏರಿಕೆ ವಾಪಸ್
* ಏಷ್ಯಾನೆಟ್ ಸುವರ್ಣ ನ್ಯೂಸ್ ವಿಸ್ತ್ರತ ವರದಿ ಪ್ರಕಟ ಮಾಡಿತ್ತು

Share this Video
  • FB
  • Linkdin
  • Whatsapp

ಉತ್ತರ ಕನ್ನಡ (ಸೆ. 04): ಶಿರಸಿ ಮಾರಿಕಾಂಬಾ ದೇಗುಲದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳ ದರ ದುಬಾರಿಯಾಗಿತ್ತು. ಪಲ್ಲಕ್ಕಿ ಸೇವೆ 650 ರೂಪಾಯಿಯಿಂದ 5,000 ಕ್ಕೆ ಏರಿಕೆಯಾಗಿದ್ದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು.

ವರದಿ ಪರಿಣಾಮ ಬೀರಿದ್ದು ದರ ಏರಿಕೆ ಮಾಡದಂತೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಶಿರಸಿ ಮಾರಾಕಾಂಬಾ ದೇವಾಲಯ ಇಡೀ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿದೆ. ಶಿರಸಿ ಜಾತ್ರೆ ಕರ್ನಾಟಕದ ಅತಿದೊಡ್ಡ ಜಾತ್ರೆ ಎಂಬ ಶ್ರೇಯ ಪಡೆದುಕೊಂಡಿದೆ.

Related Video