ಗಣರಾಜ್ಯೋತ್ಸವ ಪಥಸಂಚಲನ: ರಾಜ್ಯದಿಂದ ಅನುಭವ ಮಂಟಪ ಸ್ತಬ್ಧ ಚಿತ್ರ

ಗಣರಾಜ್ಯೋತ್ಸವದ ಪಥಸಂಚಲನಕ್ಕೆ ಸಜ್ಜುಗೊಂಡ ನವದೆಹಲಿ| ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನ| ಈ ಬಾರಿಯ ರಾಜ್ಯವನ್ನ ಅನುಭವ ಮಂಟಪ ಮಾದರಿ ಸ್ತಬ್ಧ ಚಿತ್ರ ಪ್ರತಿನಿಧಿಸಲಿದೆ| ಸ್ತಬ್ಧ ಚಿತ್ರ ಸಾಗುವ ವೇಳೆ ಟ್ಯಾಬ್ಲೋದಲ್ಲಿ ವಚನಪಠಣ ನಡೆಯಲಿದೆ| 

Share this Video
  • FB
  • Linkdin
  • Whatsapp

ಬೀದರ್‌(ಜ.23): ಗಣರಾಜ್ಯೋತ್ಸವದ ಪಥಸಂಚಲನಕ್ಕೆ ರಾಷ್ಟ್ರ ರಾಜಧಾನಿ ನವದೆಹಲಿ ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ. ಈ ಬಾರಿಯ ರಾಜ್ಯವನ್ನ ಅನುಭವ ಮಂಟಪ ಮಾದರಿ ಸ್ತಬ್ಧ ಚಿತ್ರ ಪ್ರತಿನಿಧಿಸಲಿದೆ. ಅಲ್ಲಮಪ್ರಭು, ಅಕ್ಕಮಹಾದೇವಿಯವರ ನಡುವೆ ನಡೆದ ಚರ್ಚೆಯ ಪ್ರತಿರೂಪವನ್ನು ಇದು ಒಳಗೊಂಡಿದೆ. 

ಅನುಭವ ಮಂಪಟದ ಜೊತೆಗೆ ರಾಜ್ಯದ ಜನಪದಗಳಾದ ವೀರಗಾಸೆ, ಸುಡಗಾಡು ಸಿದ್ಧ, ಕಂಸಾಳೆ, ಮೈಲಾರಲಿಂಗ ಸೇರಿದಂತೆ ಹಲವು ಸ್ತಬ್ಧ ಚಿತ್ರಗಳು ಇರಲಿವೆ. ಸ್ತಬ್ಧ ಚಿತ್ರ ಸಾಗುವ ವೇಳೆ ಟ್ಯಾಬ್ಲೋದಲ್ಲಿ ವಚನಪಠಣ ನಡೆಯಲಿರುವುದು ಮತ್ತೊಂದು ವಿಶೇಷವಾಗಿದೆ.

Related Video