Asianet Suvarna News Asianet Suvarna News

ಕಲಬುರಗಿ: ಸೋಮೇಶ್ವರ ಮಂದಿರ ಜೀರ್ಣೋದ್ಧಾರಕ್ಕೆ ಆಂದೋಲಾ ಸಿದ್ದಲಿಂಗ ಸ್ವಾಮಿಜಿ ಆಗ್ರಹ

ಕಲಬುರಗಿ (Kalaburgi) ನಗರದ ಐತಿಹಾಸಿಕ ಕೋಟೆಯಲ್ಲಿರುವ ಪುರಾತನ ಈಶ್ವರ ದೇವಾಲಯವನ್ನು (Eshwara Temple) ಪುನಶ್ಚೇತನಗೊಳಿಸಿ, ಪೂಜೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಹಿಂದೂ ಜಾಗೃತಿ ಸೇನೆ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
 

ಕಲಬುರಗಿ (ಮೇ. 23): ನಗರದ ಐತಿಹಾಸಿಕ ಕೋಟೆಯಲ್ಲಿರುವ ಪುರಾತನ ಈಶ್ವರ ದೇವಾಲಯವನ್ನು (Eshwara Temple) ಪುನಶ್ಚೇತನಗೊಳಿಸಿ, ಪೂಜೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಹಿಂದೂ ಜಾಗೃತಿ ಸೇನೆ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಕೋಟೆಯಲ್ಲಿರುವ ಪ್ರಾಚೀನ ಸೋಮೇಶ್ವರ ದೇವಾಲಯವು ಭಗ್ನಗೊಂಡಿದ್ದು, ಶಿಲ್ಪ ಕಲಾಕೃತಿಗಳು ಅವಸಾನ ತಲುಪುತ್ತಿವೆ. ಮುಳ್ಳು ಕಂಟಿಗಳಿಂದ ಮುಚ್ಚಿ ಹೋಗಿರುವ ದೇವಾಲಯದ ಸ್ಥಳವನ್ನು ಸ್ಚಚ್ಛಗೊಳಿಸಬೇಕು. ಕೋಟೆಯಲ್ಲಿ ವಾಸವಾಗಿರುವ ಅಕ್ರಮ ನಿವಾಸಿಗಳನ್ನು ಸ್ಥಳಾಂತರಗೊಳಿಸಬೇಕು. ಬಹಮನಿ ಕೋಟೆಯೊಳಗಿನ ಈ ಮಂದಿರ ಸಂಪೂರ್ಣ ನಶಿಸಿ ಹೋಗಿದೆ. ಈ ಮಂದಿರ ಮತ್ತೆ ಕಂಗೊಳಿಸಬೇಕಾದಲ್ಲಿ ಅಲ್ಲಿನ ಅಕ್ರಮ ಮುಸ್ಲಿಂ ಮನೆಗಳನ್ನು ತೆರವು ಮಾಡಬೇಕು, ಕೊಟೆಯೋಳಗಿನ ಮಂದಿರ ಸಂರಕ್ಷಣೆಗೆ ಮುಂದಾಗಬೇಕು. ಮುಂಬರುವ ಶಿವರಾತ್ರಿಯಂದು ಈ ಮಂದಿರದಲ್ಲಿ ಪೂಜೆಗಾಗಿ ಸಕಲ ವ್ಯವಸ್ಥೆ ಮಾಡಿಕೊಡಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

Video Top Stories