ಶ್ವೇತ ಕ್ರಾಂತಿಯ ವಿರುದ್ಧ ರಾಜ್ಯದಲ್ಲಿ ಹೊಸ ಕ್ರಾಂತಿ..ವಿಪಕ್ಷಗಳ ಆರೋಪವೇನು..?

ಚುನಾವಣ ರಣಕಣದ ನಡುವೆ ಮತ್ತೊಂದು ಸಂಗ್ರಾಮ ಸದ್ದಿಲ್ಲದೇ ಶುರುವಾಗಿದೆ. ಅಮುಲ್‌ ಉತ್ಪನ್ನ ವಿಸ್ತರಣೆ ಬೆನ್ನಲ್ಲೆ ಆರಂಭವಾದ ನಂದಿನಿ ಉಳಿಸಿ, ಗೋ ಬ್ಯಾಕ್‌ ಅಮುಲ್‌ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. 
 

Share this Video
  • FB
  • Linkdin
  • Whatsapp

ಚುನಾವಣ ರಣಕಣದ ನಡುವೆ ಮತ್ತೊಂದು ಸಂಗ್ರಾಮ ಸದ್ದಿಲ್ಲದೇ ಶುರುವಾಗಿದೆ.. ಈ ಯುದ್ಧ ರಾಜ್ಯದ ಭವಿಷ್ಯವನ್ನು ಡಿಸೈಡ್ ಮಾಡುತ್ತೆ ಎನ್ನುವ ಹಾಗೆ ವಾತಾವರಣ ಬದಲಾಗಿದೆ. ಬೆಂಗಳೂರಿಗೆ ಅಮುಲ್‌ ಉತ್ಪನ್ನ ವಿಸ್ತರಣೆ ಬೆನ್ನಲ್ಲೆ ಆರಂಭವಾದ ನಂದಿನಿ ಉಳಿಸಿ, ಗೋ ಬ್ಯಾಕ್‌ ಅಮುಲ್‌ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಟ್ವೀಟರ್‌ನಲ್ಲಿ ಈ ಅಭಿಯಾನ ಟ್ರೆಂಡಿಂಗ್‌ನಲ್ಲಿದೆ. ಅಮುಲ್‌ ಜತೆ ಕೆಎಂಎಫ್‌ ವಿಲೀನ ಮಾಡುವ ತಂತ್ರ ಮಾಡುತ್ತಿದ್ದೀರಾ, ಪ್ರಾದೇಶಿಕ ಸಂಸ್ಥೆಯನ್ನು ನಾಶ ಮಾಡುತ್ತಿದ್ದೀರಾ, ಅಮುಲ್‌ ಬೆಳೆಸಲು ನಂದಿನಿ ಕೃತಕ ಅಭಾವ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.ಇನ್ನೊಂದಡೆ ರಾಜ್ಯ ವಿರೋಧ ಪಕ್ಷ ಕಾಂಗ್ರೆಸ್‌, ಪ್ರಾದೇಶಕ ಪಕ್ಷ ಜ್ಯಾತ್ಯಾತೀತ ಜನತಾ ದಳ ಕೂಡಾ ಸಾಕಷ್ಟು ವಿರೋಧ ವ್ಯಕ್ತಪಡಿಸಿದೆ.ಕಳೆದ 50 ವರ್ಷಗಳ ಇತಿಹಾಸ ತೆಗೆದು ನೋಡಿದರೆ ಹೈನುಗಾರಿಕೆ ನಂಬಿಕೊಂಡು ಬಡವಾಗಿದ್ದ ರೈತರಿಗೆ ಬೆಳಕಾಗಿದ್ದು ಅಮುಲ್ ಸಂಸ್ಥೆ. ಅದರಲ್ಲೂ ಮಧ್ಯವರ್ತಿಗಳ ಕಾಟಕ್ಕೆ ಬೇಸತ್ತಿದ್ದ ರೈತರನ್ನ ಸಂಕಷ್ಟದಿಂದ ಪಾರಾಗಿಸಲು, ಸರ್ದಾರ್ ವಲ್ಲಭಭಾಯ್ ಪಟೇಲ್ ಟೊಂಕಕಟ್ಟಿ ನಿಂತಿದ್ದು, ಅಂಥಾ ಹೊತ್ತಲ್ಲಿ, ಅಮುಲ್ ಸಂಸ್ಥೆ ತನ್ನ ಸಾಧನೆ ಮೆರೆದಿತ್ತು. ಈ ಮೂಲಕ ದೇಶದಲ್ಲಿ ಒಂದು ಸಂಚಲನ ಸೃಷ್ಟಿಸಿತ್ತು. ಈಗ ಅಮುಲ್ ಸಂಸ್ಥೆ ಕರ್ನಾಟಕಕ್ಕೆ ಬರ್ತಾ ಇದೆ ಅಂದರೆ ಅದಕ್ಕೆ ಸ್ವಾಗತಕ್ಕಿಂತಾ ಹೆಚ್ಚಾಗಿ ಎದುರಾಗುತ್ತಾ ಇರುವುದು ವಿರೋಧಗಳು.. ಆ ವಿರೋಧಕ್ಕೆ ಕಾರಣ ಏನು ಅಂತ ಕೇಳಿದ್ರೆ ಬರೋ ಉತ್ತರ ಏನು ಗೊತ್ತಾ..? ಈ ವಇಡಿಯೋ ನೋಡಿ 

Related Video