ಇದೇನಾ Swachh Bharat ಕಲ್ಪನೆ?: ಗಬ್ಬು ನಾರುತ್ತಿರುವ ಬೀದರ್‌ ನಗರ..!

*  ಬೀದರ್‌ ನಗರದ ಹೃದಯಭಾಗದಲ್ಲೇ ಅನೈರ್ಮಲ್ಯ ತಾಂಡವ
*  ದುರ್ವಾಸನೆಯಿಂದಾಗಿ ಹೈರಾಣಾಗಿ ಹೋದ ವ್ಯಾಪಾರಸ್ಥರು 
*  ಕೊರೋನಾಗಿಂತ ಮತ್ತೊಂದು ಮಹಾಮಾರಿ ಅಟ್ಯಾಕ್‌ ಆಗೋದು ಗ್ಯಾರಂಟಿ
 

Share this Video
  • FB
  • Linkdin
  • Whatsapp

ಬೀದರ್‌(ಜ.02): ನಗರದ ಹೃದಯಭಾಗದಲ್ಲೇ ಅನೈರ್ಮಲ್ಯ ತಾಂಡವವಾಡುತ್ತಿದೆ. ಅಂಬೇಡ್ಕರ್‌ ವೃತ್ತದ ಬಳಿ ಇರುವ ಚರಂಡಿಯಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ಗಬ್ಬು ವಾಸನೆ ಬರುತ್ತಿದೆ. ಇದೇ ಚರಂಡಿ ಸುತ್ತ ಕಸ, ಕಡ್ಡಿ ತಂದು ಹಾಕುತ್ತಾರೆ. ಅದೇ ಜಾಗದಲ್ಲಿ ಮೂರ್ತ ವಿಸರ್ಜನೆ ಮಾಡುತ್ತಾರೆ. ವಾರಕ್ಕೊಂದು ನಾಯಿ, ನರಿ, ಬೆಕ್ಕು ಸಾಯೋದು ಸಾಮಾನ್ಯವಾಗಿದೆ. ಇದರಿಂದ ಬರುವ ದುರ್ವಾಸನೆಯಿಂದಾಗಿ ವ್ಯಾಪಾರಸ್ಥರು ಹೈರಾಣಾಗಿ ಹೋಗಿದ್ದಾರೆ. ಇಲ್ಲಿಗೆ ಬರುವ ಗ್ರಾಹಕರು ಮೂಗು ಮುಚ್ಚಿಕೊಂಡೇ ಓಡಾಡುವಂತ ಪರಿಸ್ಥಿತಿ ಅನಿವಾರ್ಯವಾಗಿದೆ. ಹೀಗೆ ಮುಂದುವರೆದ್ರೆ ಕೊರೋನಾಗಿಂತ ಮತ್ತೊಂದು ಮಹಾಮಾರಿ ಅಟ್ಯಾಕ್‌ ಆಗೋದು ಗ್ಯಾರಂಟಿ. ಎಷ್ಟೇ ಸಲ ನಗರಸಭೆಯವರಿಗೆ ಹೇಳಿದ್ರೂ ಸಮಸ್ಯೆ ಮಾತ್ರ ಸಮಸ್ಯೆಯಾಗಿಯೇ ಉಳಿದಿದೆ ಅಂತಾರೆ ಇಲ್ಲಿ ವ್ಯಾಪಾರಸ್ಥರು.

Thirthahalli: ನಾನು ರಾಜೀನಾಮೆ ಕೊಡುವ ಸ್ಥಿತಿ ತರಬೇಡಿ, ಪೊಲೀಸರಿಗೆ ಗೃಹ ಸಚಿವರ ಮನವಿ

Related Video