Covid-19 Crisis: ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾ ಆರ್ಭಟ: ಶೇ.20 ಪಾಸಿಟಿವಿಟಿ!
ಗಡಿನಾಡು ಜಿಲ್ಲೆ ಬಳ್ಳಾರಿಯಲ್ಲಿ ಮಹಾಮಾರಿ ಕೊರೋನಾ ಆರ್ಭಟ ಮುಂದುವರೆದಿದ್ದು, ಈ ಬಗ್ಗೆ ನಿಗಾ ವಹಿಸುವಂತೆ ಜಿಲ್ಲಾಡಳಿತಕ್ಕೆ ಸರ್ಕಾರವು ವಾರ್ನಿಂಗ್ ನೀಡಿದೆ. ಬಳ್ಳಾರಿ ಸೇರಿ 5 ಜಿಲ್ಲೆಗಳು ಕೊರೊನಾ ಹಾಟ್‌ಸ್ಪಾಟ್‌ಗಳಾಗಿವೆ.
ಬಳ್ಳಾರಿ (ಜ.25): ಗಡಿನಾಡು ಜಿಲ್ಲೆ ಬಳ್ಳಾರಿಯಲ್ಲಿ ಮಹಾಮಾರಿ ಕೊರೋನಾ (Coronavirus) ಆರ್ಭಟ ಮುಂದುವರೆದಿದ್ದು, ಈ ಬಗ್ಗೆ ನಿಗಾ ವಹಿಸುವಂತೆ ಜಿಲ್ಲಾಡಳಿತಕ್ಕೆ ಸರ್ಕಾರವು ವಾರ್ನಿಂಗ್ ನೀಡಿದೆ. ಬಳ್ಳಾರಿ ಸೇರಿ 5 ಜಿಲ್ಲೆಗಳು ಕೊರೊನಾ ಹಾಟ್‌ಸ್ಪಾಟ್‌ಗಳಾಗಿವೆ. 10 ದಿನದಲ್ಲಿ ಶೇ.20ಕ್ಕಿಂತ ಹೆಚ್ಚು ಪಾಸಿಟಿವ್ ದರ ದಾಖಲಾಗಿದೆ. 100 ಮಂದಿಯಲ್ಲಿ ಕೊರೋನಾ ಪರೀಕ್ಷೆ ಮಾಡಿದಾಗ 20 ಜನರಲ್ಲಿ ಪಾಸಿಟಿವ್ ಬರುತ್ತಿದೆ. ಹೀಗಾಗಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಕರಣ ಹೆಚ್ಚಳವಾಗುತ್ತಿರುವುದರಿಂದ ಜಿಲ್ಲೆಯ ಜನರನ್ನು ಮತಷ್ಟು ಭಯಭೀತಿಗೊಳಿಸುವಂತೆ ಮಾಡಿದೆ. ಅದರಲ್ಲಿಯೂ ಬಳ್ಳಾರಿಯೊಂದರಲ್ಲೇ ದಿನೇ ದಿನೇ ಕೊರೋನಾ ಸಂಖ್ಯೆ ಹೆಚ್ಚಳವಾಗುತ್ತಲೇ ಸಾಗಿದೆ.
Covid-19 Crisis: 3ನೇ ಅಲೆಯಲ್ಲೇ ಗರಿಷ್ಠ: ಮೂವರಲ್ಲಿ ಒಬ್ಬರಿಗೆ ಕೊರೋನಾ