ಹುಬ್ಬಳ್ಳಿಯಲ್ಲಿ ನಿಲ್ಲದ ಮಳೆ: ಕೆರೆ ಕಟ್ಟೆ ಒಡೆದು ಜಮೀನುಗಳಿಗೆ ನುಗ್ಗಿದ ನೀರು
* ಮಳೆಯಿಂದಾಗಿ ಹುಬ್ಬಳ್ಳಿಯಲ್ಲಿ ಜನಜೀವನ ಅಸ್ತವ್ಯಸ್ತ
* ಕೆರೆ, ಕಟ್ಟೆಗಳು ಒಡೆದು ಜಮೀನುಗಳಿಗೆ ನುಗ್ಗಿದ ನೀರು
* ಭತ್ತ, ಸೋಯಾಬಿನ್ ಹತ್ತಿ ಬೆಳೆ ನಾಶ
ಹುಬ್ಬಳ್ಳಿ(ಜೂ.19): ನಿರಂತರ ಮಳೆಯಿಂದಾಗಿ ಹುಬ್ಬಳ್ಳಿಯಲ್ಲಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಕೆರೆ, ಕಟ್ಟೆಗಳು ಒಡೆದು ಜಮೀನುಗಳಿಗೆ ನೀರು ನುಗ್ಗಿದೆ. ತಾಲೂಕಿನ ಹಟಕಿನಾಳದ ಜಿಗಿಲಿ ಕೆರೆ ಕಟ್ಟೆ ಒಡೆದು ಅವಾಂತರ ಸೃಷ್ಟಿಯಾಗಿದೆ. ಜಮೀನುಗಳಿಗೆ ನೀರು ನುಗ್ಗಿದ್ದರಿಂದ ಭತ್ತ, ಸೋಯಾಬಿನ್ ಹತ್ತಿ ಬೆಳೆ ನೀರಿನಲ್ಲಿ ನಿಂತಿದೆ. ಹೀಗಾಗಿ ರೈತರು ಚಿಂತಾಕ್ರಾಂತರಾಗಿದ್ದಾರೆ.