ಭೀಮಾತೀರಕ್ಕೆ ಎಡಿಜಿಪಿ ಭೇಟಿ ನೀಡಿ ಗ್ಯಾಂಗ್ ನಡುವೆ ಸಂಧಾನ, ನೆತ್ತರ ಕಹಾನಿಗೆ ಬೀಳುತ್ತಾ ಬ್ರೇಕ್?

ಭೀಮಾತೀರದ ದಶಕಗಳ ಇತಿಹಾಸದಲ್ಲೆ ನಡೆಯದ ಅದೊಂದು ಕೆಲಸವನ್ನ ಖಡಕ್‌ ಪೊಲೀಸ್‌ ಆಫೀಸರ್‌ ಎಂದೇ ಖ್ಯಾತಿ ಪಡೆದಿರುವ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್‌ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ವಿಜಯಪುರ (ಫೆ.17): ಭೀಮಾತೀರದ ದಶಕಗಳ ಇತಿಹಾಸದಲ್ಲೆ ನಡೆಯದ ಅದೊಂದು ಕೆಲಸವನ್ನ ಖಡಕ್‌ ಪೊಲೀಸ್‌ ಆಫೀಸರ್‌ ಎಂದೇ ಖ್ಯಾತಿ ಪಡೆದಿರುವ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್‌ ಮಾಡಿದ್ದಾರೆ. ಈ ಹಿಂದೆ ನಕಲಿ ಎನ್ಕೌಂಟರ್‌ ಮೂಲಕ ಭೀಮಾತೀರದಲ್ಲಿ ಖಾಕಿಗೆ ಅಂಟಿದ ಕೊಳೆಯನ್ನ ತೊಳೆಯಲು ಸ್ವತಃ ಅಲೋಕಕುಮಾರ್‌ ಭೀಮೆಯ ಮಕ್ಕಳು ಮೆಚ್ಚುವಂತ ಅದೊಂದು ಕೆಲಸವನ್ನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅದೇನಂದ್ರೆ ಎಡಿಜಿಪಿ ಅಲೋಕ್‌ ಕುಮಾರ್ ಹಠಕ್ಕೆ ಬಿದ್ದವರಂತೆ ಕೊನೆಗು ಭೀಮಾತೀರದ ಎರಡು ನಟೋರಿಯಸ್‌ ಹಂತಕ ಪಡೆಗಳ ನಡುವೆ ರಾಜಿ ಸಂಧಾನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಭೀಮಾತೀರದ ಮಾಸ್ಟರ್‌ ಮೈಂಡ್‌ ಅಂತಾ ಕರೆಯಿಸಿಕೊಳ್ಳುವ ಮಲ್ಲಿಕಾಜೀ ಚಡಚಣ ಗ್ಯಾಂಗ್‌ ಹಾಗೂ ಭೀಮಾತೀರದಲ್ಲಿ ಜೀವ ಉಳಿಸಿಕೊಳ್ಳಲು ಸದಾ ಬಂದೂಕಿನ ಬೆಂಗಾವಲನ್ನೆ ಕಟ್ಟಿಕೊಂಡು ಅಡ್ತಾಡ್ತಿದ್ದ ಬೈರಗೊಂಡ ಗ್ಯಾಂಗಿನ ನಡುವೆ ಸಂಧಾನ ನಡೆದಿದೆ.

Related Video