ಬನಶಂಕರಿ ಜಾತ್ರೆಯಲ್ಲಿ ಸೊಂಟ ಬಳಕಿಸಿದ ನಟಿ ರಾಗಿಣಿ: ಹುಚ್ಚೆದ್ದು ಕುಣಿದ ಫ್ಯಾನ್ಸ್‌!

ಬಾದಾಮಿ ಬನಶಂಕರಿದೇವಿ ಜಾತ್ರೆಯ ನಾಟಕದಲ್ಲಿ ಡ್ಯಾನ್ಸ್‌ ಮಾಡಿದ ನಟಿ ರಾಗಿಣಿ| ಬಾಗಲಕೋಟೆ ಜಿಲ್ಲೆಯ ಬಾದಾಮಿ ಬನಶಂಕರಿ ದೇವಿ ಜಾತ್ರೆ| ಮನಸ್ಯಾಕ ಕೊಟ್ಟಿ, ಕೈಯಾಕ ಬಿಟ್ಟಿ ನಾಟಕದಲ್ಲಿ ಹೆಜ್ಜೆ ಹಾಕಿದ ರಾಗಿಣಿ| ಬಾದಾಮಿಯ ರಸ್ತೆ ಬದಿಯ ಹೊಟೇಲ್‌ನಲ್ಲಿ ಊಟ ಮಾಡಿದ ರಾಗಿಣಿ|

Share this Video
  • FB
  • Linkdin
  • Whatsapp

ಬಾಗಲಕೋಟೆ(ಜ.18): ಜಿಲ್ಲೆಯ ಬಾದಾಮಿ ಬನಶಂಕರಿದೇವಿ ಜಾತ್ರೆಯ ನಾಟಕದಲ್ಲಿ ಸ್ಯಾಂಡಲ್‌ವುಡ್‌ ನಟಿ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಭರ್ಜರಿ ಡ್ಯಾನ್ಸ್‌ ಮಾಡುವ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದಾರೆ. ತುಪ್ಪಾ ಬೇಕಾ ತುಪ್ಪ ಹಾಡಿಗೆ ಡ್ಯಾನ್ಸ್‌ಗೆ ನಟಿ ರಾಗಿಣಿ ಸೊಂಟ ಬಳಕಿಸಿದ್ದಾರೆ. ಮನಸ್ಯಾಕ ಕೊಟ್ಟಿ, ಕೈಯಾಕ ಬಿಟ್ಟಿ ನಾಟಕದಲ್ಲಿ ಹೆಜ್ಜೆ ಹಾಕಿದ್ದಾರೆ. 

ಬಾದಾಮಿ ಬನಶಂಕರಿ ಜಾತ್ರೆಯಲ್ಲೂ ಸದ್ದು ಮಾಡ್ತಿದೆ 'ಹೌದ್ದ ಹುಲಿಯಾ' ನಾಟಕ!

ಶ್ರೀ ಗುರು ಮಲ್ಲಿಕಾರ್ಜುನ ನಾಟ್ಯ ಸಂಘ, ಕಲ್ಲೂರು ತಂಡದಿಂದ ಮನಸ್ಯಾಕ ಕೊಟ್ಟಿ, ಕೈಯಾಕ ಬಿಟ್ಟಿ ನಾಟಕ‌ ಪ್ರದರ್ಶನಗೊಳ್ಳುತ್ತಿದೆ. ಎರಡು ದಿನ ನಾಟಕದಲ್ಲಿ ರಾಗಿಣಿ ದ್ವಿವೇದಿ ಡ್ಯಾನ್ಸ್ ಮಾಡುವ ಮೂಲಕ ಪ್ರೇಕ್ಷಕರು, ಅಭಿಮಾನಿಗಳನ್ನು ರಂಜಿಸಿದ್ದಾರೆ. ರಾಗಿಣಿ ಸೊಂಟ ಬಳಕುಸುತ್ತಿದ್ದಂತೆ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದಾರೆ. ಇದಕ್ಕೂ ಮುನ್ನ ಬಾದಾಮಿಗೆ ಬಂದ ವೇಳೆ ರಸ್ತೆ ಬದಿಯ ಹೊಟೇಲ್‌ನಲ್ಲಿ ಊಟ ಮಾಡಿದ್ದಾರೆ. 

Related Video