ಬೈಕ್‌ ಸವಾರರೇ ಎಚ್ಚರ: ಈ ವಿಡಿಯೋ ನೋಡಿದ್ರೆ ಎದೆ ಝಲ್‌ ಅನ್ನುತ್ತೆ!

ಎರಡು ಬೈಕ್‌ಗಳ ಮಧ್ಯೆ ಡಿಕ್ಕಿ| ಓರ್ವ ಬೈಕ್ ಸವಾರ ಸಾವು| ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ| ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ|

First Published Jan 9, 2020, 11:29 AM IST | Last Updated Jan 9, 2020, 11:29 AM IST

ವಿಜಯಪುರ(ಜ.09): ಎರಡು ಬೈಕ್‌ಗಳು ಡಿಕ್ಕಿ ಹೊಡೆದ ಪರಿಣಾಣ ಓರ್ವ ಬೈಕ್‌ ಸವಾರ ಸಾವನ್ನಪ್ಪಿದ ಘಟನೆ ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿ ನಡೆದಿದೆ. ಮೃತನನ್ನ ತಾಲೂಕಿನ ಸಂಗಾಪುರ ನಿವಾಸಿ ನಿಂಗಪ್ಪ ಜಾನೋಜಿ(50) ಎಂದು ಗುರುತಿಸಲಾಗಿದೆ. 

ಕಳೆದ ವರ್ಷ ಡಿ. 18ರಂದು  ಘಟನೆ ನಡೆದಿದೆ. ಎರಡು ಬೈಕ್‌ಗಳು ಡಿಕ್ಕಿ ಹೊಡೆದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಂದು ಬೈಕ್‌ಗೆ ಡಿಕ್ಕಿ ಹೊಡೆದ  ರಭಸಕ್ಕೆ ಇನ್ನೊಂದು ಬೈಕ್ ಸವಾರ ಅಣತಿ ದೂರ ಹಾರಿಬಿದ್ದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  
 

Video Top Stories