Asianet Suvarna News Asianet Suvarna News

ಮಂಗಳೂರಿನಲ್ಲಿ 9 ಬೀಫ್ ಸ್ಟಾಲ್​ಗೆ ಅವಕಾಶ: ವಿಶ್ವ ಹಿಂದೂ ಪರಿಷತ್‌ ಕಿಡಿ

ಮಂಗಳೂರು ಮಹಾನಗರ ಪಾಲಿಕೆಯಿಂದ ಬೀಫ್‌ ಸ್ಟಾಲ್‌ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಇದಕ್ಕೆ ವಿಶ್ವ ಹಿಂದೂ ಪರಿಷತ್‌ ವಿರೋಧ ವ್ಯಕ್ತಪಡಿಸಿದೆ.

ಬಿಜೆಪಿ ಆಡಳಿತವಿರುವ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀಫ್ ಸ್ಟಾಲ್ ತೆರೆಯುವ ಯೋಜನೆ ಕೈಗೊಳ್ಳಲಾಗಿದ್ದು, ಇದು ವಿಶ್ವ ಹಿಂದೂ ಪರಿಷತ್ ಕೆಂಗಣ್ಣಿಗೆ ಗುರಿಯಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ 9 ಬೀಫ್‌ ಸ್ಟಾಲ್‌ ನಿರ್ಮಾಣದ ನೀಲಿ ನಕಾಶೆ ಸಿದ್ಧಪಡಿಸಲಾಗಿದೆ. 114 ಕೋಟಿ ವೆಚ್ಚದಲ್ಲಿ ನೂತನ ಸೆಂಟ್ರಲ್ ‌ಮಾರ್ಕೆಟ್ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗಿದ್ದು, ಅಲ್ಲಿ 9 ಭೀಫ್ ಸ್ಪಾಲ್ ತೆರೆಯಲು ನೀಲಿ ನಕ್ಷೆ ತಯಾರಾಗಿದೆ. ಗೋ ಹತ್ಯೆ ನಿಷೇಧದ ಬಳಿಕವು ಬೀಫ್‌ ಸ್ಟಾಲ್‌ಗೆ ಅವಕಾಶ ನೀಡಿದಕ್ಕಾಗಿ ವಿರೋಧ ವ್ಯಕ್ತವಾಗಿದೆ.

Mandya : ಹಾಳಾದ ರಸ್ತೆ: ಗ್ರಾಮಕ್ಕೆ ಬಸ್‌ ಸಂಚಾರವೇ ಇಲ್ಲ
 

Video Top Stories