Chikkamagaluru: ಕಸಾಯಿಖಾನೆ ಪಾಲಾಗ್ತಿದ್ದ 70ಕ್ಕೂ ಹೆಚ್ಚು ಗೋವುಗಳಿಗೆ ಮರುಜನ್ಮ..!

*   ಚಿಕ್ಕಮಗಳೂರಿನ ಇಂದಾವರದಲ್ಲಿ ಗೋವುಗಳಿಗೆ ಆಶ್ರಯ 
*   ದನಗಳ್ಳರ ಹಾವಳಿಯಿಂದ ಬೇಸತ್ತು ಗೋಶಾಲೆ ಕಟ್ಟಿದ ಯುವಕರು
*   ದನಗಳನ್ನ ಸಾಕಲಾಗದೇ ಕಸಾಯಿಖಾನೆಗೆ ಮಾರುವವರ ಮನವೊಲಿಕೆ
 

First Published Jan 21, 2022, 12:21 PM IST | Last Updated Jan 21, 2022, 12:21 PM IST

ಚಿಕ್ಕಮಗಳೂರು(ಜ.21):  ಗೋವುಗಳನ್ನ ಸಾಕೋದು ಏನು ದೊಡ್ಡ ವಿಚಾರವೇನಲ್ಲ. ಆದ್ರೆ, ಇಲ್ಲಿರೋ 70ಕ್ಕೂ ಹೆಚ್ಚು ದನಕರುಗಳು ಒಂದು ದಿನ ಲೇಟಾಗಿದ್ರೂ ನಮ್ಮ ಕಣ್ಣೆದುರು ಇರ್ತಾ ಇರ್ಲಿಲ್ಲ. ಎಲ್ಲವೂ ಕಸಾಯಿ ಖಾನೆಗೆ ಹೋಗಲು ತಯಾರಿ ನಡೆದಿತ್ತು. ಈ ವಿಚಾರವನ್ನ ತಿಳಿದ ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದ ಕಾಮಧೇನು ಗೋ ಗೋಶಾಲೆಯ ಭಗವಾನ್, ಲಕ್ಷ್ಮಣ್ ಸೇರಿ ಮೋಹನ್ ಗೌಡ ಎಂಬುವರ ಸಹಾಯ ಪಡೆದು ಈ ಗೋವುಗಳನ್ನ ಕಾಪಾಡಿದ್ದಾರೆ. 

ನಮಗೆ ಈ ದನಗಳನ್ನ ಸಾಕಲು ಸಾಧ್ಯವಾಗ್ತಿಲ್ಲ. ಹಾಗಾಗಿ ಈಗಾಗಲೇ ಕಸಾಯಿಖಾನೆಗೆ ಮಾರಲು ಮುಂದಾಗಿ, ಅಡ್ವಾನ್ಸ್ ಕೂಡ ಪಡೆದಿದ್ದೇವೆ ಅಂತಾ ದನಗಳನ್ನ ಮಾರಲು ಸಿದ್ದರಾದವರ ಮನಸ್ಸನ್ನೇ ಈ ಗೋ ಪಾಲಕರು ಬದಲಾಯಿಸಿದ್ದಾರೆ. ಸದ್ಯ 70ರಲ್ಲಿ 40ಕ್ಕೂ ಹೆಚ್ಚು ರಾಸುಗಳು ಉಳಿದ 30ಕ್ಕೂ ಹೆಚ್ಚು ಗಂಡು ಕರುಗಳು ಇದೀಗ ಕಸಾಯಿಖಾನೆಯ ಬದಲು ಗೋಶಾಲೆಯಲ್ಲಿ ಆಶ್ರಯ ಪಡೆದು ನೆಮ್ಮದಿಯಾಗಿವೆ. 

Weekend Curfew:ಎಲ್ಲಾ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮ: ಸಿಎಂ ಭರವಸೆ

ಒಟ್ಟಾರೆ, ಸದ್ಯ 80ಕ್ಕೂ ಹೆಚ್ಚು ದನಕರುಗಳಿಗೆ ಪುನರ್ ಜೀವನ ಕೊಟ್ಟು ಸಾಕುತ್ತಿರೋ ಈ ಗೋಪಾಲಕರ ಕಾಳಜಿಗೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ಗೋವುಗಳ ರಕ್ಷಣೆಗೆ ಕಟಿಬದ್ಧರಾಗಿರುವವರ ಕಾರ್ಯ ನಿಜಕ್ಕೂ ಪ್ರಶಂಸನೀಯ. ಒಟ್ಟಿನಲ್ಲಿ ಈ ಗೋಪಾಲಕರ ಸಮಯಪ್ರಜ್ಞೆಯಿಂದ 70ಕ್ಕೂ ಹೆಚ್ಚು ದನಕರುಗಳು ಮರಜನ್ಮವನ್ನೇ ಪಡೆಯುವಂತಾಗಿದೆ.