565ಕ್ಕೆ ಏರಿದ ರಾಜ್ಯದ ಸೋಂಕಿತರ ಸಂಖ್ಯೆ, ಯಾವ-ಯಾವ ಜಿಲ್ಲೆ ರೆಡ್ ಝೋನ್‌ಗೆ?

ರಾಜ್ಯದಲ್ಲಿ ಗುರುವಾರ 30 ಜನರಿಗೆ ಸೋಂಕು/ ಬೆಳಗಾವಿಯಲ್ಲಿ 14 ಜನರಿಒಗೆ ಕೊರೋನಾ/ ಪಾದರಾಯನಪುರದಲ್ಲಿಯೂ ಇಬ್ಬರಿಗೆ ಸೋಂಕು/ ಆತಂಕ ತಂದ ಗುರುವಾರದ ಬೆಳವಣಿಗೆ

Share this Video
  • FB
  • Linkdin
  • Whatsapp

ಬೆಂಗಳೂರು(ಏ. 30) ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 565ಕ್ಕೆ ಏರಿಕೆಯಾಗಿದೆ. ಬೆಳಗಾವಿಯಲ್ಲಿ ಒಂದೇ ದಿನ 14 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಕೆಲ ದಿನಗಳಿಂದ ದೂರವಾಗಿದ್ದ ಆತಂಕ ಮತ್ತೆ ಕಾಣಿಸಿಕೊಂಡಿದೆ.

ಕೈಗಾರಿಕೆ ಓಪನ್‌ಗೆ ಗ್ರೀನ್ ಸಿಗ್ನಲ್, ಮೇ 4 ರ ನಂತರ ಮತ್ತೇನು ಸಡಿಲಿಕೆ?

ಬೆಳಗಾವಿಯಲ್ಲಿ ಇಂದು ಒಟ್ಟು 14 ಜನರಿಗೆ ಕೊರೊನಾ ಪತ್ತೆಯಾಗಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯ ಹಾಟ್‍ಸ್ಪಾಟ್ ತಾಲೂಕು ಹಿರೇಬಾಗೇವಾಡಿಯಲ್ಲೇ 12 ಮಂದಿಗೆ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನಲ್ಲಿ ಮೂವರಿಗೆ, ವಿಜಯಪುರದಲ್ಲಿ ಇಬ್ಬರಿಗೆ, ತುಮಕೂರು, ದಕ್ಷಿಣ ಕನ್ನಡ, ದಾವಣಗೆರೆ ಜಿಲ್ಲೆಯಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. 

Related Video