ಜೂನ್ 27ಕ್ಕೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕೆಂಪೇಗೌಡರ ಬೃಹತ್ ಪ್ರತಿಮೆ ಅನಾವರಣ

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ರಾಜ್ಯ ಸರ್ಕಾರದಿಂದ  64 ಕೋಟಿ ವೆಚ್ಚದಲ್ಲಿ ಕೆಂಪೇಗೌಡರ 108 ಅಡಿ  ಪ್ರತಿಮೆ ನಿರ್ಮಾಣವಾಗುತ್ತಿದೆ. 

First Published Jun 9, 2022, 6:54 PM IST | Last Updated Jun 9, 2022, 6:54 PM IST

ಬೆಂಗಳೂರು (ಜೂ. 09): ನಗರದ ದೇವನಹಳ್ಳಿಯಲ್ಲಿರುವ  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ  ಬೃಹತ್ ಕಂಚಿನ ಪುತ್ಥಳಿ ನಿರ್ಮಾಣವಾಗುತ್ತಿದೆ.  ರಾಜ್ಯ ಸರ್ಕಾರದಿಂದ 64 ಕೋಟಿ ವೆಚ್ಚದಲ್ಲಿ 108 ಅಡಿ ಪ್ರತಿಮೆ ನಿರ್ಮಾಣವಾಗುತ್ತಿದೆ. 90 ಅಡಿ ಕಂಚಿನ ಪುತ್ಥಳಿ, 18 ಅಡಿ ಎತ್ತರದ ಪೀಠವನ್ನು ಹೊಂದಿರುವ ಬೃಹತ್ ಪ್ರತಿಮೆಯನ್ನು ವಿಮಾನ ನಿಲ್ದಾಣದಲ್ಲಿ ತಲೆ ಎತ್ತಲಿದೆ.   ಜೂ. 27ರಂದು ಕೆಂಪೇಗೌಡರ ಜಯಂತಿಯಂದೆ ಪ್ರತಿಮ ಅನಾವರಣವಾಗಲಿದೆ. 

ಇದನ್ನೂ ನೋಡಿ: 9 ತಿಂಗಳ ಮಗುವಿನೊಂದಿಗೆ ಮ್ಯಾನ್‌ಹೋಲ್‌ಗೆ ಬಿದ್ದ ಮಹಿಳೆ: ಭಯಾನಕ ವಿಡಿಯೋ

ದೇಶ ವಿದೇಶಗಳಿಂದ ಬರುವ ಪ್ರಯಾಣಿಕರೆಲ್ಲರೂ ಕೆಂಪೇಗೌಡರ ಪ್ರತಿಮೆಯನ್ನು ವೀಕ್ಷಿಸಬೇಕು. ಆ ಮೂಲಕ ಕೆಂಪೇಗೌಡರ ವ್ಯಕ್ತಿತ್ವವು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆಯಬೇಕು ಎಂಬ ಉದ್ದೇಶದಿಂದ ವಿಮಾನ ನಿಲ್ದಾಣದ ಬಳಿ ಎಲ್ಲರ ಗಮನ ಸೆಳೆಯುವಂತಹ ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದೆ. 

Video Top Stories