Asianet Suvarna News Asianet Suvarna News

IPL 2020: 2ನೇ ವಾರದಲ್ಲಿ RCB ತಂಡದಲ್ಲಿ ಯಾರು ಪಾಸ್? ಯಾರು ಫೇಲ್?

Oct 5, 2020, 11:08 AM IST

ಬೆಂಗಳೂರು(ಅ.05): 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗಿ ಎರಡು ವಾರಗಳು ಕಳೆದಿವೆ. ಎರಡನೇ ವಾರದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ದಾಖಲಿಸುವ ಮೂಲಕ ಆತ್ಮವಿಶ್ವಾಸದಿಂದ ಬೀಗುತ್ತಿದೆ.

ಅದರಲ್ಲೂ ಐಪಿಎಲ್ ಟೂರ್ನಿಯ ಎರಡನೇ ವಾರದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸೂಪರ್‌ ಓವರ್‌ನಲ್ಲಿ ಗೆದ್ದು ಬೀಗಿದ್ದ ವಿರಾಟ್ ಪಡೆ, ಆ ಬಳಿಕ ರಾಜಸ್ಥಾನ ರಾಯಲ್ಸ್ ವಿರುದ್ಧ 8 ವಿಕೆಟ್‌ಗಳ ಅನಾಯಾಸ ಗೆಲುವು ಸಾಧಿಸಿದೆ.

IPL 2020: RCB ಹಾಗೂ ಡೆಲ್ಲಿ ಗೆಲುವಿನ ಹೀರೋ ಯಾರು..?

ಕನ್ನಡಿಗ ದೇವದತ್ ಪಡಿಕ್ಕಲ್ ಆಕರ್ಷಕ ಫಾರ್ಮ್‌ನಲ್ಲಿದ್ದರೆ, ಸ್ಪಿನ್ ಜೋಡಿ ಚಹಲ್ ಹಾಗೂ ವಾಷಿಂಗ್ಟನ್ ಸುಂದರ್ ಜೋಡಿ ಬೌಲಿಂಗ್‌ನಲ್ಲಿ ಆರ್‌ಸಿಬಿ ತಂಡಕ್ಕೆ ನೆರವಾಗುತ್ತಿದ್ದಾರೆ. ಎರಡನೇ ವಾರದಲ್ಲಿ ಆರ್‌ಸಿಬಿ ತಂಡದ ಪ್ರದರ್ಶನ ಹೇಗಿತ್ತು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.
 

Video Top Stories