IPL 2020: CSK ತಂಡದ್ದು ಏನಿದ್ದರೂ ಭಾರತದಲ್ಲೇ ಆರ್ಭಟ..!

2 ವರ್ಷಗಳ ನಿಷೇಧದ ಬಳಿಕ ಐಪಿಎಲ್‌ಗೆ ಮರಳಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ 2018ರಲ್ಲಿ ಚಾಂಪಿಯನ್, 2019ರಲ್ಲಿ ಕೂದಲೆಳೆ ಅಂತರದಲ್ಲಿ ಕಪ್ ಮಿಸ್ ಮಾಡಿಕೊಂಡಿತ್ತು. ಈ ಮೂಲಕ ಸೀನಿಯರ್ಸ್ ತಂಡ ಎನ್ನುವವರ ಬಾಯಿ ಮುಚ್ಚಿಸಿತ್ತು.

First Published Sep 27, 2020, 1:37 PM IST | Last Updated Sep 27, 2020, 1:37 PM IST

ದುಬೈ(ಸೆ.27): ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಸತತ ಎರಡು ಪಂದ್ಯಗಳನ್ನು ಹೀನಾಯವಾಗಿ ಸೋತಿದೆ. ಅರಬ್ಬರ ನಾಡಿನಲ್ಲಿ ಸಿಎಸ್‌ಕೆ ಆಟ ನಡೆಯುತ್ತಿಲ್ಲ.

ಹೌದು, 2 ವರ್ಷಗಳ ನಿಷೇಧದ ಬಳಿಕ ಐಪಿಎಲ್‌ಗೆ ಮರಳಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ 2018ರಲ್ಲಿ ಚಾಂಪಿಯನ್, 2019ರಲ್ಲಿ ಕೂದಲೆಳೆ ಅಂತರದಲ್ಲಿ ಕಪ್ ಮಿಸ್ ಮಾಡಿಕೊಂಡಿತ್ತು. ಈ ಮೂಲಕ ಸೀನಿಯರ್ಸ್ ತಂಡ ಎನ್ನುವವರ ಬಾಯಿ ಮುಚ್ಚಿಸಿತ್ತು.

IPL 2020: ಸೋಲಿನ ಬೆನ್ನಲ್ಲೇ CSK ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಕೊಟ್ಟ ಧೋನಿ..!

ಆದರೆ ಇದೀಗ ಯುಎಇನಲ್ಲಿ ಸೀನಿಯರ್ಸ್ ತಂಡ ಸಿಎಸ್‌ಕೆ ಸತತ 2 ಸೋಲು ಕಾಣುವುದರ ಮೂಲಕ ಭಾರೀ ಹಿನ್ನಡೆ ಅನುಭವಿಸಿದೆ. ಯುಎಇ ವಾತಾವರಣಕ್ಕೆ ಸಿಎಸ್‌ಕೆ ಹೊಂದಿಕೊಂಡಂತೆ ಕಾಣುತ್ತಿಲ್ಲ. ಇದರ ಜತೆಗೆ ಭಾರತದಲ್ಲಿ ಅಬ್ಬರಿಸಿದಂತೆ ಸಿಎಸ್‌ಕೆಗೆ ಅರಬ್ಬರ ನಾಡಿನಲ್ಲಿ ಮಿಂಚಲು ಸಾಧ್ಯವಾಗುತ್ತಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.