Asianet Suvarna News Asianet Suvarna News

ಐಪಿಎಲ್ 2020 ಲೀಗ್‌ ಹಂತದ ಮ್ಯಾಚ್ ಹೇಗಿದ್ವು..?

Nov 4, 2020, 2:36 PM IST

ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್ ಹಂತದ ಪಂದ್ಯಾವಳಿಗಳು ಮುಕ್ತಾಯವಾಗಿವೆ. ಲೀಗ್ ಹಂತದ 56ನೇ ಹಾಗೂ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡ ಕ್ವಾಲಿಫೈಯರ್‌ಗೆ ಅರ್ಹತೆಗಿಟ್ಟಿಸಿಕೊಂಡಿದೆ.

ಹೌದು, ಇದೀಗ ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ತೋರಿದ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳೀಗ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕಾದಾಡಿದರೆ, ಎಲಿಮಿನೇಟರ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖುಯಾಗಲಿವೆ.

ಅಚ್ಚರಿಯಾದ್ರೂ ಸತ್ಯ; ಬುಮ್ರಾಗಿಂತ ಡೇಂಜರ್ ಬೌಲರ್ ಸಂದೀಪ್ ಶರ್ಮಾ..!

ಲೀಗ್‌ ಹಂತದಲ್ಲಿ 5 ಶತಕಗಳು ದಾಖಲಾಗಿವೆ. ಇನ್ನು ಆರೆಂಜ್ ಕ್ಯಾಪ್ ಕೆ.ಎಲ್. ರಾಹುಲ್ ಬಳಿಯಿದ್ದರೆ, ಪರ್ಪಲ್ ಕ್ಯಾಪ್‌ ಕಗಿಸೋ ರಬಾಡ ಬಳಿ ಇದೆ. ಲೀಗ್ ಹಂತದ ಮತ್ತಷ್ಟು ಇಂಟ್ರೆಸ್ಟಿಂಗ್ ವಿಚಾರಗಳ ವಿಶ್ಲೇಷಣೆ ಇಲ್ಲಿದೆ