Asianet Suvarna News Asianet Suvarna News

IPL 2020: ಇಂದಾದರೂ ಆ ಮಿಸ್ಟೇಕ್ ಸರಿಪಡಿಸಿಕೊಳ್ಳುತ್ತಾ KKR?

Oct 7, 2020, 4:16 PM IST

ಅಬುಧಾಬಿ(ಅ.07): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಬಲಿಷ್ಠ ಕೋಲ್ಕತ ನೈಟ್‌ ರೈಡರ್ಸ್ ತಂಡ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅಬುಧಾಬಿಯ ಶೇಖ್ ಜಾಯೆದ್ ಮೈದಾನದಲ್ಲಿ ಎದುರಿಸಲಿದೆ.

ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿದ 5 ಪಂದ್ಯಗಳಲ್ಲಿ 3 ಸೋಲು ಹಾಗೂ 2 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದರೆ, ಕೆಕೆಆರ್ ತಂಡ 4 ಪಂದ್ಯಗಳಲ್ಲಿ ತಲಾ 2 ಗೆಲುವು ಹಾಗೂ 2 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

IPL 2020: ಚೆನ್ನೈ ಸವಾಲು ಸ್ವೀಕರಿಸಲು ಬಲಿಷ್ಠ ಕೆಕೆಆರ್ ರೆಡಿ..!

ಅದರಲ್ಲೂ ದಿನೇಶ್ ಕಾರ್ತಿಕ್ ನೇತೃತ್ವದ ಕೋಲ್ಕತ ನೈಟ್‌ ರೈಡರ್ಸ್ ಕೇವಲ ಒಂದು ಮಿಸ್ಟೇಕ್‌ನಿಂದ ಎರಡು ಪಂದ್ಯಗಳನ್ನು ಕೈಚೆಲ್ಲಿದೆ. ಹೀಗಾಗಿ ಆ ಮಿಸ್ಟೇಕ್‌ ಸರಿಪಡಿಸಿಕೊಂಡು ಕೆಕೆಆರ್ ಕಣಕ್ಕಿಳಿಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
 

Video Top Stories