Asianet Suvarna News Asianet Suvarna News

ಮಗಳಾದ ಸೊಸೆ, ಕೊರೋನಾ ಸೋಂಕಿತ ಮಾವನ ಹೊತ್ತುಕೊಂಡೇ ಆಸ್ಪತ್ರೆಗೆ ತಲುಪಿದಳು!

ಸೊಸೆಯೊಬ್ಬಳು ಅತ್ತೆ, ಮಾವನನ್ನು ತನ್ನ ತಂದೆ ತಾಯಿಯಂತೆ ಕಂಡರೆ ವಿಶ್ವದಲ್ಲಿ ನಡೆಯುವ ಕಲಹಗಳು ಬಹುತೇಕ ಕಡಿಮೆಯಾಗುತ್ತವೆ ಎಂಬ ಮಾತಿದೆ. ಇದು ವಾಸ್ತವ ಕೂಡಾ. ಹಾಗಾದ್ರೆ ಸೊಸೆಯೊಬ್ಬಳು ಹೀಗೆ ನಡೆದುಕೊಂಡ್ರೆ ಹೇಗಿರುತ್ತೆ ಎಂಬುವುದಕ್ಕೆ ನಿದರ್ಶನವೆಂಬಂತೆ ಭುವನೇಶ್ವರದಲ್ಲಿ ನಡೆದಿದೆ.

ಭುವನೇಶ್ವರ(ಜೂ.07): ಸೊಸೆಯೊಬ್ಬಳು ಅತ್ತೆ, ಮಾವನನ್ನು ತನ್ನ ತಂದೆ ತಾಯಿಯಂತೆ ಕಂಡರೆ ವಿಶ್ವದಲ್ಲಿ ನಡೆಯುವ ಕಲಹಗಳು ಬಹುತೇಕ ಕಡಿಮೆಯಾಗುತ್ತವೆ ಎಂಬ ಮಾತಿದೆ. ಇದು ವಾಸ್ತವ ಕೂಡಾ. ಹಾಗಾದ್ರೆ ಸೊಸೆಯೊಬ್ಬಳು ಹೀಗೆ ನಡೆದುಕೊಂಡ್ರೆ ಹೇಗಿರುತ್ತೆ ಎಂಬುವುದಕ್ಕೆ ನಿದರ್ಶನವೆಂಬಂತೆ ಭುವನೇಶ್ವರದಲ್ಲಿ ನಡೆದಿದೆ.

ಇಲ್ಲೊಬ್ಬ ಸೊಸೆ ಕೊರೋನಾ ಸೋಂಕಿತ ತನ್ನ ಮಾವನನ್ನು ಬೆನ್ನ ಮೇಲೇ ಹೊತ್ತುಕೊಂಡು ಆಸ್ಪತ್ರೆಗೆ ಧಾವಿಸಿದ್ದಾಳೆ. ಹೌದು ಈ ಮಹಿಳೆಯ ಪತಿ ಸೂರಜ್ ಬೇರೆ ಊರಿನಲ್ಲಿ ಕೆಲಸ ಮಾಡುತ್ತಿದ್ದಾರೆ, ಮನೆಯಲ್ಲಿ 74 ವರ್ಷದ ಮಾವನಿಗೆ ಕೊರೋನಾ ತಗುಲಿದೆ. ಆರೋಗ್ಯ ಸ್ಥಿತಿ ತುಂಬಾ ಹದಗೆಟ್ಟಿದ್ದ ಕಾರಣ ಏನು ಮಾಡುವುದೆಂದು ಮಹಿಳೆಗೆ ತೋಚಲಿಲ್ಲ ಹಾಗಾಗಿ ಮಾವನನ್ನು ಹೊತ್ತು ಕೋವಿಡ್‌ ಕೇಂದ್ರಕ್ಕೆ ತೆರಳಿದ್ದಾಳೆ.

ಮಾವನಿಗೆ ಕೊರೊನಾ ಸೋಂಕು ಇದೆ ಎಂದು ತಿಳಿದರೂ ತನ್ನ ಪ್ರಾಣವನ್ನು ಲೆಕ್ಕಿಸಲು ಅವರನ್ನು ಹೊತ್ತು ಕೋವಿಡ್ ಕೇಂದ್ರಕ್ಕೆ ಸಾಗಿದ ಸೊಸೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Video Top Stories