
ಆಗ ಅಬ್ದುಲ್ ಕಲಾಂ, ಈಗ ಆರೀಫ್ ಖಾನ್! ಹಿಂದೂ ಹುಲಿಗಳ ಆಡಳಿತದಲ್ಲಿ ಮುಸ್ಲಿಂ ರಾಷ್ಟ್ರಪತಿಗೆ ಮಣೆ?
ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಪ್ರೋ ಹಿಂದೂ ಸರ್ಕಾರ ಅಂತಲೇ ಕರೆಯುತ್ತಾರೆ. ಚುನಾವಣೆ ಬಂದ್ರೆ ಸಾಕು ಹಿಂದುತ್ವವನ್ನೇ ಪ್ರಚಾರದ ಸರಕಾಗಿ ಬಳಸುತ್ತಾರೆ. ಸಾಕಷ್ಟು ಜನ ಮೋದಿ ಸರ್ಕಾರ ಮುಸ್ಲಿಂ ವಿರೋಧಿ ಸರ್ಕಾರ ಎಂದು ಹೇಳುವುದೂ ಉಂಟು. ಆದರೆ ಈಗ ಮೋದಿ ಸರ್ಕಾರ ಮುಸ್ಲಿಂ ರಾಷ್ಟ್ರಪತಿ ಮಾಡಲು ಹೊರಟಿದೆ ಎಂಬ ವಿಚಾರ ಸುದ್ದಿಯಾಗುತ್ತಿದೆ.
ಪ್ರಧಾನಿ ಮೋದಿ (PM Modi) ನೇತೃತ್ವದ ಸರ್ಕಾರಕ್ಕೆ ಪ್ರೋ ಹಿಂದೂ (Pro Hindu) ಸರ್ಕಾರ ಅಂತಲೇ ಕರೆಯುತ್ತಾರೆ. ಚುನಾವಣೆ ಬಂದ್ರೆ ಸಾಕು ಹಿಂದುತ್ವವನ್ನೇ ಪ್ರಚಾರದ ಸರಕಾಗಿ ಬಳಸುತ್ತಾರೆ. ಸಾಕಷ್ಟು ಜನ ಮೋದಿ ಸರ್ಕಾರ ಮುಸ್ಲಿಂ ವಿರೋಧಿ ಸರ್ಕಾರ ಎಂದು ಹೇಳುವುದೂ ಉಂಟು. ಆದರೆ ಈಗ ಮೋದಿ ಸರ್ಕಾರ ಮುಸ್ಲಿಂ ರಾಷ್ಟ್ರಪತಿ (President) ಮಾಡಲು ಹೊರಟಿದೆ ಎಂಬ ವಿಚಾರ ಸುದ್ದಿಯಾಗುತ್ತಿದೆ.
ಜುಲೈನಲ್ಲಿ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಇಸ್ಲಾಮಿಕ್ ಮೂಲಭೂತವಾತದ ವಿರುದ್ಧ ಗಟ್ಟಿದನಿಯಲ್ಲಿ ಮಾತನಾಡುವ ಛಾತಿ ಹೊಂದಿರುವ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿ ಮಾಡಲು ಬಿಜೆಪಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
2002ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವಿಜ್ಞಾನಿ ಅಬ್ದುಲ್ ಕಲಾಂರನ್ನು ರಾಷ್ಟ್ರಪತಿ ಮಾಡಿದ್ದರು. ಈಗ ಅಟಲ್‌ರಂಥದ್ದೇ ನಡೆಯನ್ನು ಮೋದಿ ಅನುಸರಿಸಬಹುದು. ಮುಸ್ಲಿಂ ನಾಯಕನನ್ನು ರಾಷ್ಟ್ರಪತಿ ಅಭ್ಯರ್ಥಿ ಮಾಡಬಹುದು. ಹಾಗಾದರೆ ಈ ನಿರ್ಧಾರದ ಹಿಂದಿನ ಉದ್ಧೇಶವೇನು..? ಇಲ್ಲಿದೆ ನೋಡಿ