ಸಂವಿಧಾನಕ್ಕೆ ಅಪಾಯ ಯಾರಿಂದ? ಕಾಂಗ್ರೆಸ್-ಬಿಜೆಪಿ ನಡುವೆ ಜಟಾಪಟಿ!

ಸಂವಿಧಾನಕ್ಕೆ ನಿಜಕ್ಕೂ ಅಪಾಯವಿದೆಯಾ? ಮೋದಿ ಸರ್ಕಾರದಿಂದ ಸಂವಿಧಾನ ಅಪಾಯದಲ್ಲಿದೆ ಎಂದು  ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಬಿಜೆಪಿಯ ತಿರುಗೇಟು ನೀಡಿದೆ. ಸಂವಿಧಾನಕ್ಕೆ ಯಾರಿಂದ ಅಪಾಯ? 

Share this Video
  • FB
  • Linkdin
  • Whatsapp

ಸಂವಿಧಾನ ಸ್ವೀಕರಿಸಿ ಇದೀಗ 75 ವರ್ಷಗಳು ತುಂಬಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಸಂವಿಧಾನ ಅಪಾಯದಲ್ಲಿದೆ ಅನ್ನೋ ಆರೋಪ ಮತ್ತೆ ಜೋರಾಗಿ ಕೇಳಿಬರುತ್ತಿದೆ. ಇತ್ತ ಪ್ರಧಾನಿ ಮೋದಿ ಅಂಬೇಡ್ಕರ್ ರಚಿಸಿದ ಸಂವಿಧಾನ ರಕ್ಷಣೆಗೆ ನಾವು ಪ್ರತಿಬದ್ಧ ಎಂದಿದ್ದಾರೆ. ಇದೇ ವೇಳೆ ಸಂವಿಧಾನದಲ್ಲಿ ವಕ್ಫ್ ಬೋರ್ಡ್ ಕಾನೂನಿಗೆ ಅವಕಾಶವೇ ಇಲ್ಲ ಎಂದಿದ್ದಾರೆ. ಇತ್ತ ರಾಹುಲ್ ಗಾಂಧಿ ಮತ್ತೆ ಮೋದಿ ವಿರುದ್ದ ಆರೋಪಿಸಿದ್ದಾರೆ. ಭಾರತದ ಸಂವಿಧಾನ ಪುಸ್ತಕವನ್ನು ಮೋದಿ ಓದಿಯೇ ಇಲ್ಲ ಎಂದಿದ್ದಾರೆ. ಕಾಂಗ್ರೆಸ್-ಬಿಜೆಪಿ ಸೇರಿದಂತೆ ಯಾವ ರಾಜಕೀಯ ಪಕ್ಷದಿಂದ ಸಂವಿಧಾನಕ್ಕೆ ಅಪಾಯವಿದೆ?

Related Video