Asianet Suvarna News Asianet Suvarna News

ಖಲಿಸ್ತಾನ ಹೋರಾಟದ ನೇತೃತ್ವದ ವಹಿಸಿದ ಅಮೃತ್ ಪಾಲ್ ಸಿಂಗ್ ಯಾರು?

ಪಂಜಾಬ್‌ ರಾಜ್ಯದಲ್ಲಿ 2ನೇ ಭಿಂದ್ರನ್‌ವಾಲೆ ಎಂಬ ಖ್ಯಾತಿಯನ್ನೂ ಪಡೆದಿದ್ದಾನೆ. 2012 ರಿಂದ 10 ವರ್ಷ ದುಬೈ ಟ್ರಾನ್ಸ್‌ಪೋರ್ಟ್‌ ಬ್ಯುಸಿನೆಸ್‌ನಲ್ಲಿ ಕೆಲಸ ಮಾಡಿದ್ದ ಎಂದೂ ತಿಳಿದುಬಂದಿದ್ದು, 2022 ರಲ್ಲಿ ಪಂಜಾಬ್‌ಗೆ ಹಿಂದಿರುಗಿದ್ದಾನೆ. 

ಪಂಜಾಬ್‌ನಲ್ಲಿ ಪ್ರತ್ಯೇಕ ರಾಷ್ಟ್ರಕ್ಕೆ ಮತ್ತೆ ಮಹಾಸಂಚು ನಡೆಯುತ್ತಿದೆ ಎನ್ನಲಾಗಿದ್ದು, 30 ವರ್ಷದ ಅಮೃತ್‌ಪಾಲ್‌ ಸಿಂಗ್ ಪ್ರತ್ಯೇಕ ರಾಷ್ಟ್ರಕ್ಕೆ ಹೋರಾಡ್ತಿದ್ದಾರೆ. ಈ ಅಮೃತ್‌ಪಾಲ್‌ ಸಿಂಗ್ ಖಲಿಸ್ತಾನಿ ನಾಯಕನಾಗಿದ್ದು, ಅಮೃತಸರದ ಜಲ್ಲುಪುರ್‌ ಖೈರಾ ಬಾಬಾ ಬಾಕಲ್‌ ಈತನ ಹುಟ್ಟೂರು. ಈತ ಖಲಿಸ್ತಾನಿ ಉಗ್ರ ಭಿಂದ್ರನ್‌ವಾಲೆಯ ಕಟ್ಟಾ ಅನುಯಾಯಿಯೂ ಆಗಿದ್ದಾನೆ. ಅಲ್ಲದೆ, ಪಂಜಾಬ್‌ ರಾಜ್ಯದಲ್ಲಿ 2ನೇ ಭಿಂದ್ರನ್‌ವಾಲೆ ಎಂಬ ಖ್ಯಾತಿಯನ್ನೂ ಪಡೆದಿದ್ದಾನೆ. 2012 ರಿಂದ 10 ವರ್ಷ ದುಬೈ ಟ್ರಾನ್ಸ್‌ಪೋರ್ಟ್‌ ಬ್ಯುಸಿನೆಸ್‌ನಲ್ಲಿ ಕೆಲಸ ಮಾಡಿದ್ದ ಎಂದೂ ತಿಳಿದುಬಂದಿದ್ದು, 2022 ರಲ್ಲಿ ಪಂಜಾಬ್‌ಗೆ ಹಿಂದಿರುಗಿದ್ದಾನೆ. 

Video Top Stories