ಲೋಕಸಮರದಲ್ಲಿ ಹುಟ್ಟಿಕೊಂಡಿದೆ ಹೊಸ ಲೆಕ್ಕಾಚಾರ! ಅಮಿತ್ ಶಾಗೆ ಪಟ್ಟಕಟ್ಟಲು ಮೋದಿ ಪ್ರಯತ್ನ?
ಬಿಜೆಪಿಯಲ್ಲಿ ಒಂದು ಅಲಿಖಿತ ನಿಯಮ ಇದೆ.. ಆ ನಿಯಮದ ಬಗ್ಗೆ ಇದ್ದಕ್ಕಿದ್ದ ಹಾಗೇ ಅರವಿಂದ್ ಕೇಜ್ರಿವಾಲ್ ಅಬ್ಬರಿಸ್ತಾ ಇದಾರೆ.. ಬಿಜೆಪಿಯ ಭವಿಷ್ಯದ ಬಗ್ಗೆ ಮಾತಾಡ್ತಾ ಇದಾರೆ.. ಆ ಮಾತಿಗೆ ಬಿಜೆಪಿ ಕೂಡ ಕೆಂಡವಾಗಿದೆ.
ಬೆಂಗಳೂರು(ಮೇ.13): ಕೇಸರಿ ಪಾಳಯದಲ್ಲಿದೆಯಾ ಆ ಅಲಿಖಿತ ನಿಯಮದ ಬಗ್ಗೆ ಮಾತನಾಡಿದ್ದಕ್ಕೆ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಕೆಂಡವಾಗಿದೆ. ಕೇಜ್ರಿವಾಲ್ ಹೇಳಿದ 75ರ ಗುಟ್ಟೇನು ಗೊತ್ತಾ..? ಜೂನ್ 4ಕ್ಕಿಂತಾ 2025ರ ಸೆಪ್ಪಂಬರ್ 17ರ ಬಗ್ಗೆ ಎಎಪಿ ಕೌತುಕ ಹೆಚ್ಚಾಗಿದೆ.
ಅಂದ ಹಾಗೆ ಕೇಜ್ರಿವಾಲ್ ಮಾತಾಡಿದ್ದು ಮೋದಿ ಅವರ ಬಗ್ಗೆ, ಮೋದಿ ಅವರ ನಿವೃತ್ತಿಯ ಬಗ್ಗೆ.. ಒಂದು ಕಡೆ ರಾಹುಲ್ ಗಾಂಧಿ, ಮೋದಿ ಪ್ರಧಾನಿ ಆಗಲ್ಲ ಅಂತಿದ್ದಾರೆ.. ಇನ್ನೊಂದು ಕಡೆ ಕೇಜ್ರಿವಾಲ್ ಅಮಿತ್ ಶಾ ಪ್ರಧಾನಿಯಾಗ್ತಾರೆ ಅಂತಿದ್ದಾರೆ.. ಅಷ್ಟಕ್ಕೂ ಈ ಇಬ್ಬರ ಮಾತಿಗೆ ಆಧಾರವೇನು..? ಈ ಮಾತಿಗೆ ಕೇಸರಿಪಾಳಯ ಹೇಳೋದೇನು?
ಬಿಜೆಪಿ ಅಧಿಕಾರಕ್ಕೆ ಬಂದರೆ, ಯೋಗಿ ಬದಿಗೆ ಸರಿಸಿ ಅಮಿತ್ ಶಾ ಪಿಎಂ ಆಗ್ತಾರೆ: ಅರವಿಂದ್ ಕೇಜ್ರಿವಾಲ್!
ಮೋದಿ ಅವರೇ ಅವತ್ತು, ನನ್ನ ಮೂರನೇ ಅವಧಿಯಲ್ಲಿ, ನಿಮ್ಮ ಕನಸುಗಳನ್ನ ಸಾಕಾರಗೊಳಿಸೋ ಗ್ಯಾರಂಟಿ ಕೊಡ್ತೀನಿ ಅಂತ ಹೇಳಿದ್ರು.. ಅವರು ಹಾಗೆ ಹೇಳಿದಾಗ ಪಕ್ಷದವರೇ ಆಗ್ಲಿ, ಮತ್ಯಾರೇ ಆಗ್ಲಿ, ಅದರ ವಿರುದ್ಧ ಮಾತಾಡ್ಲಿಲ್ಲ.. ಮೂರನೇ ಅವಧಿಗೂ ಮೋದಿಯೇ ಪ್ರಧಾನಿ ಅಭ್ಯರ್ಥಿ ಘೋಷಿಸಿಕೊಂಡಮೇಲೂ, ಯಾರೂ ಏನೂ ಹೇಳಿರ್ಲಿಲ್ಲ..ಆದ್ರೆ ಈಗ, ಎಲೆಕ್ಷನ್ ನಡೀತಿರುವಾಗ, ಕೇಜ್ರಿವಾಲ್ ಹೊಸ ವಿವಾದಕ್ಕೆ ಜೀವ ತುಂಬೋ ಪ್ರಯತ್ನ ಮಾಡಿದ್ದಾರೆ.