ನಟಿ ಮನೆಯಲ್ಲಿತ್ತು 50 ಕೋಟಿ ರೂ, ಬಂಗಾಳ ಸಚಿವನ ಮಾಯಾಂಗನೆಯ ಬಂಗಾರದ ಕೋಟೆ ರಹಸ್ಯ!
ಬಂಗಾಳದಲ್ಲಿ ಮುಖರ್ಜಿ ಹಾಗೂ ಚಟರ್ಜಿ ಸೇರಿ ಬ್ಯಾನರ್ಜಿ ಅವರಿಗೆ ಭಾರಿ ಇರಿಸು ಮುರಿಸು ತಂದಿದ್ದಾರೆ. ಸಚಿನ ಆಪ್ತೆ ಮನೆಯಲ್ಲಿ ಹುಡುಕಿದಷ್ಟು ಕಂತೆ ಕಂತೆ ನೋಟುಗಳು ಸಿಗುತ್ತಲೇ ಇದೆ. ಈಗಾಗಲೇ 50 ಕೋಟಿ ರೂ ವಶಪಡಿಸಿದ್ದಾರೆ. ದೀದಿ ಸರ್ಕಾರದ ಸಚವಿನ ಮಾಯಾಂಗನೆಯ ಅಸಲಿ ಕತೆ ಇಲ್ಲಿದೆ.
ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣ ದೊಡ್ಡ ಸದ್ದನ್ನು ಮಾಡ್ತಾ ಇದೆ. ಸಾಮಾನ್ಯ ನಟಿ ಒಬ್ಬಳ ಮನೆಯಲ್ಲಿ ಬರೋಬ್ಬರಿ 50 ಕೋಟಿಗೂ ಅಧಿಕ ಹಾರ್ಡ್ ಕ್ಯಾಶ್ ಸಿಕ್ಕಿದೆ.. ಅದರ ಜಾಲವನ್ನ ಹುಡುಕ್ತಾ ಹೋದ ಹಾಗೇ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಪ್ತರ ಹೆಸರುಗಳು ಕೇಳಿ ಬರೋದಕ್ಕೆ ಶುರು ವಾಗಿದೆ. ಸಿಕ್ಕಿರೋ ಹಣ ಸಾಮಾನ್ಯ ಮೊತ್ತವಲ್ಲಾ.ಅಲ್ಲಿದ್ದ ಸಿಕ್ಕಿರೋ ಒಟ್ಟೂ ಆಸ್ತಿಯಿಂದ ಅರ್ಧ ಪಾಕಿಸ್ತಾನವನ್ನ ಮುಕ್ಕಾಲು ಶ್ರೀಲಂಕಾವನ್ನ ಖರೀದಿ ಮಾಡೋ ಆಲೋಚನೆಯೂ ನಿಮಗೆ ಬರಬಹುದು.. ಬನ್ನಿ ಹಾಗಾದ್ರೆ ದೀದಿ ನಾಡಿನಲ್ಲಿ ಸದ್ದು ಮಾಡ್ತಾ ಇರೋ ಆ ಮಹಾ ಹಗರಣದ ಪಿನ್ ಟು ಪಿನ್ ಮಾಹಿತಿಯನ್ನ ನೋಡೋಣ.