
ವಕ್ಫ್ ಬಿಲ್ ವಿರೋಧಿಸಲು ಕಾಂಗ್ರೆಸ್ ಸೇರಿ ವಿಪಕ್ಷಗಳು ನೀಡುತ್ತಿರುವ ಕಾರಣಗಳೇನು?
ವಕ್ಫ್ ಬಿಲ್ ವಿರುದ್ಧ ಕೆಂಡವಾದ ಕಾಂಗ್ರೆಸ್ ಸಂಸದ ಸೈಯದ್ ನಾಸಿರ್, ಕರ್ನಾಟಕ ವಕ್ಫ್ ಬೋರ್ಡ್ ಅಕ್ರಮ ಬಿಚ್ಚಿಟ್ಟ ಬಿಜೆಪಿ, ಒವೈಸಿ ವಿರುದ್ಧ ಜಗದಂಬಿಕಾ ಪಾಲ್ ಕಿಡಿ, ಜೆಪಿಸಿ ಸಭೆ ಮಾಹಿತಿ ಬಹಿರಂಗ, ಕ್ಫ್ ಬಿಲ್ ಕುರಿತು ಒಂದು ಮಾತನಾಡಲಿಲ್ಲ ರಾಹುಲ್ ಗಾಂಧಿ ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
,
ವಕ್ಫ್ ತಿದ್ದುಪಡಿ ನಿಯಮದಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ತಂದ ವಕ್ಫ್ ಬಿಲ್‌ಗೆ ವಿಪಕ್ಷಗಳು, ಮುಸ್ಲಿಮ್ ಸಂಸದರು ವಿರೋಧ ವ್ಯಕ್ತಪಡಿಸಿದ್ದಾರೆ. ವಕ್ಫ್ ಯಾವುದೇ ಆಸ್ತಿ ಎಂದು ಹಕ್ಕು ಮಂಡಿಸಿದರೆ ಇದೀಗ ನ್ಯಾಯಾಂಗದ ಮೊರೆ ಹೋಗಬಹುದು. ಇದನ್ನು ವಿಪಕ್ಷಗಳು ವಿರೋಧಿಸಿದೆ. ಎಲ್ಲರ ಬಾಯಲ್ಲೂ ಸಂವಿಧಾನ ವಿರೋಧಿ ಅನ್ನೋ ಮಾತು ಕೇಳಿಬರುತ್ತದೆ.ಆದರೆ ಹೇಗೆ ಸಂವಿಧಾನ ವಿರೋಧಿ? ಪ್ರಶ್ನೆಗೆ ಉತ್ತರವೇನು? ವಕ್ಫ್ ಬಿಲ್ ಲೋಕಸಭೆಯಲ್ಲಿ ಮಂಡನೆಯಾದಾಗ ಬಹುತೇಕರು ಈ ಕರಿತು ಚರ್ಚೆ ನಡೆಸಿದ್ದಾರೆ. ಆದರೆ ರಾಹುಲ್ ಗಾಂಧಿ ಈ ಕುರಿತು ಒಂದು ಮಾತು ಆಡಿಲ್ಲ. ಟ್ವೀಟ್ ಮೂಲಕ ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.