ವಕ್ಫ್ ತಿದ್ದುಡಪಡಿ ಕಾನೂನಿಗೆ ತಡೆ ನೀಡಲು ಸುಪ್ರೀಂ ನಕಾರ, 2 ಅಂಶಗಳಲ್ಲಿ ಯಥಾ ಸ್ಥಿತಿ ಪಾಲನೆ

ವಕ್ಪ್ ತಿದ್ದುಪಡಿ ನಿಯಮದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ, ಸಿಲಿಂಡರ್ ಹೊತ್ತು ಕೇಂದ್ರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ, ಜಾತಿ ಗಣತಿ ವರದಿ ಆಧರಿಸಿ ಯಾವ ಸಮುದಾಯದ ಮೀಸಲಾತಿ ಏರಿಕೆಯಾಗಲಿದೆ? ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ವಕ್ಫ್ ತಿದ್ದುಪಡಿ ಕಾನೂನು ಕುರಿತ ಪರ ವಿರೋಧ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಇಂದು ವಾದ ಆಲಿಸಿದ ಸುಪ್ರೀಂ ಕೋರ್ಟ್ ಈ ಕಾನೂನಿಗೆ ತಡೆ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಎರಡು ವಿಚಾರಗಳಿಗೆ ಅತೀ ಹೆಚ್ಚು ವಿರೋಧವಿದೆ. ಹೀಗಾಗಿ ಈ ಎರಡು ಅಂಶಗಳಲ್ಲಿ ಯಥಾಸ್ಥಿತಿ ಕಾಪಾಡಲಾಗುತ್ತದೆ. ಅರ್ಜಿ ವಿಚಾರಣೆ ಮುಗಿದು ಸುಪ್ರೀಂ ಕೋರ್ಟ್ ಆದೇಶ ನೀಡುವ ವರೆಗೆ ವಕ್ಪ್ ಬೋರ್ಡ್‌ನಲ್ಲಿ ಮುಸ್ಲಿಮೇತರರಿಗೆ ಅವಕಾಶ ಹಾಗೂ ವಕ್ಪ್ ಬೈ ಯೂಸರ್ ಅಂಶಗಳು ಯಥಾ ಸ್ಥಿತಿ ಕಾಪಾಡಿಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಕೋರ್ಟ್‍‌ಗೆ ಹೇಳಿದೆ.

Related Video