ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪರಶುರಾಮನ ಹಾರಾಟ!

ಈ ಬಾರಿಯ ಗಣ ರಾಜ್ಯೋತ್ಸವದಲ್ಲಿ ಹಲವು ವಿಶೇಷತೆಗಳಿವೆ. 1947-48ರಲ್ಲಿ ನಡೆದ ಪಾಕಿಸ್ತಾನ ನಡುವಿನ ಘರ್ಷಣೆ ವೇಳೆ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ವಿಂಟೇಜ್ ಡಕೋಟಾ ಏರ್‌ಕ್ರಾಫ್ಟ್ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. ಡಕೋಟಾ ಏರ್‌ಕ್ರಾಫ್ಟ್ ಇದೀಗ ಪರಶುರಾಮ ಎಂಬ  ಹೆಸರಿನೊಂದಿಗೆ  ರಾಜಪಥದಲ್ಲಿ ಹಾರಾಟ ನಡೆಸಲಿದೆ
 

Share this Video
  • FB
  • Linkdin
  • Whatsapp

ಈ ಬಾರಿಯ ಗಣ ರಾಜ್ಯೋತ್ಸವದಲ್ಲಿ ಹಲವು ವಿಶೇಷತೆಗಳಿವೆ. 1947-48ರಲ್ಲಿ ನಡೆದ ಪಾಕಿಸ್ತಾನ ನಡುವಿನ ಘರ್ಷಣೆ ವೇಳೆ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ವಿಂಟೇಜ್ ಡಕೋಟಾ ಏರ್‌ಕ್ರಾಫ್ಟ್ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. ಡಕೋಟಾ ಏರ್‌ಕ್ರಾಫ್ಟ್ ಇದೀಗ ಪರಶುರಾಮ ಎಂಬ ಹೆಸರಿನೊಂದಿಗೆ ರಾಜಪಥದಲ್ಲಿ ಹಾರಾಟ ನಡೆಸಲಿದೆ.

ಹಿಂದೂ ಪುರಾಣದಲ್ಲಿನ ವಿಷ್ಣುವಿನ ಆರನೇ ಆವತಾರವಾಗಿರುವ ಪರಶುರಾಮನ ಹೆಸರನ್ನು ಈ ಡಕೋಟಾ ಏರ್‌ಕ್ರಾಫ್ಟ್‌ಗೆ ಇಡಲಾಗಿದೆ. 2018ರಲ್ಲಿ ಪರಶುರಾಮ ಏರ್‌ಕ್ರಾಪಫ್ಟ್ ಭಾರತೀಯ ವಾಯುಸೇನೆಯ 86ನೇ ವರ್ಷಾಚರಣೆಯಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿತ್ತು.

ವಿಂಟೇಜ್ ಡಕೋಟಾ ಏರ್‌ಕ್ರಾಫ್ಟ್‌ನ್ನು ರಾಜ್ಯಸಭಾ ಸದಸ್ಯ, ಬಿಜೆಪಿ ವಕ್ತಾರ ರಾಜೀವ್ ಚಂದ್ರಶೇಖರ್ ಖರೀದಿಸಿ ವಾಯುಸೇನೆಗೆ ಉಡುಗೊರೆಯಾಗಿ ನೀಡಿದ್ದಾರೆ. ಚಂದ್ರಶೇಖರ್ ತಂದೆ MK ಚಂದ್ರಶೇಕರ್ ಇದೇ ಡಕೋಟಾ ಏರ್‌ಕ್ರಾಫ್ಟ್ ಪೈಲೆಟ್ ಆಗಿ ಸೇವೆ ಸಲ್ಲಿಸಿದ್ದರು.

ಅಕ್ಟೋಬರ್ 26, 1947ರಲ್ಲಿ ಬುಡಕಟ್ಟು ಉಗ್ರರಿಂದ ಶ್ರೀನಗರ ರಕ್ಷಿಸಿದ ಹೆಗ್ಗಳಿಕೆ ಇದೇ ಡಕೋಟ ಏರ್‌ಕ್ರಾಫ್ಟ್‌ಗಿದೆ. ಡಕೋಟಾ ಏರ್‌ಕ್ರಾಫ್ಟ್ ಮೂಲಕ ಸೈನಿಕರನ್ನು ಏರ್‌ಲಿಫ್ಟ್ ಮಾಡಿ, ಶ್ರೀನಗರ ಉಳಿಸುವಲ್ಲಿ ಯಶಸ್ವಿಯಾಗಿತ್ತು. ಇನ್ನು ಬಾಂಗ್ಲಾಗೆ ಸ್ವಾತಂತ್ರ್ಯ ಕೊಡುವಲ್ಲಿ ಇದೇ ಡಕೋಟಾ ಏರ್‌ಕ್ರಾಫ್ಟ್ ಪ್ರಮುಖ ಪಾತ್ರ ನಿರ್ವಹಿಸಿತ್ತು.

Related Video