Vijay Diwas ಹುತಾತ್ಮ ಯೋಧರಿಗೆ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್ ಗೌರವ ನಮನ!

ಡಿಸೆಂಬರ್ 16, 1971ರಲ್ಲಿ ಭಾರತೀಯ ಸೇನಾ ಪರಾಕ್ರಮಕ್ಕೆ ಪಾಕಿಸ್ತಾನ ಮಂಡಿಯೂರಿತ್ತು. ಇಷ್ಟೇ ಅಲ್ಲ ಭಾರತದ ಶೌರ್ಯಕ್ಕೆ ಬಾಂಗ್ಲಾದೇಶ ಪಾಕ್ ಕೈಯಿಂದ ವಿಮುಕ್ತಿಗೊಂಡಿತ್ತು. ಈ ದಿನವನ್ನು ಭಾರತ ವಿಜಯ್ ದಿವಸ್ ಆಚರಣೆ ಮಾಡುತ್ತಿದೆ. ಇಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ.
 

Share this Video
  • FB
  • Linkdin
  • Whatsapp

1971ರಲ್ಲಿ ಪಾಕಿಸ್ತಾನ ಮೇಲೆ ಯುದ್ಧದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಬಾಂಗ್ಲಾದೇಶವನ್ನು ಭಾರತೀಯ ಸೇನೆ ವಿಮುಕ್ತಿಗೊಳಿಸಿತ್ತು. 93,000 ಪಾಕಿಸ್ತಾನ ಸೈನಿಕರನ್ನು ಶರಣಾಗುವಂತೆ ಮಾಡಿದ ದಿನವೇ ವಿಜಯ ದಿವಸ್. ಈ ಯುದ್ಧದಲ್ಲಿ ಮಡಿದ ಭಾರತೀಯ ಹುತಾತ್ಮ ಯೋಧರಿಗೆ ಕೇಂದ್ರ ರಾಜೀವ್ ಚಂದ್ರಶೇಖರ್ ಗೌರವ ನಮನ ಸಲ್ಲಿಸಿದ್ದಾರೆ. ನವದೆಹಲಿಯ ಯುದ್ಧ ಸ್ಮಾರಕದಲ್ಲಿ ಕೇಂದ್ರ ಸಚಿವರು ಗೌರವ ನಮನ ಸಲ್ಲಿಸಿದರು. ಪ್ರತಿ ವರ್ಷ 16 ರಂದು ಭಾರತದ ಮೂಲೆ ಮೂಲೆಯಲ್ಲಿ ವಿಜಯ್ ದಿವಸ್ ಆಚರಣೆ ಮಾಡಲಾಗುತ್ತದೆ.

Related Video