News Hour: ಮುಖ್ತಾರ್ ಮನೆಗೆ ಅಖಿಲೇಶ್ ಭೇಟಿ, 'ಮಾಜಿ ಸಿಎಂ ಕಲ್ಯಾಣ್ ಸಿಂಗ್ ನಿಧನವಾದಾಗ ಎಲ್ಲಿದ್ರಿ' ಪ್ರಶ್ನಿಸಿದ BJP
ಉತ್ತರ ಪ್ರದೇಶದ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಮಾಜಿ ಡಾನ್ ಮುಖ್ತಾರ್ ಅನ್ಸಾರಿ ಮನೆಗೆ ಭೇಟಿ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಇದು ಮುಸ್ಲಿಂ ತುಷ್ಟೀಕರಣ ಪರಾಕಾಷ್ಠೆ ಎಂದು ಬಿಜೆಪಿ ಟೀಕಿಸಿದೆ.
ಬೆಂಗಳೂರು (ಏ.9): ಉತ್ತರ ಪ್ರದೇಶದಲ್ಲಿ ಡಾನ್ ಮುಖ್ತಾರ್ ಅನ್ಸಾರಿ ಡೆತ್ ಪಾಲಿಟಿಕ್ಸ್ ಜೋರಾಗಿ ನಡೆಯುತ್ತಿದೆ. ಮುಸ್ಲಿಂ ಓಲೈಕೆ ಅಖಿಲೇಶ್ ಯಾದವ್ ಇಳಿದಿದ್ದಾರೆ. ಕುಟುಂಬಸ್ಥರಿಗೆ ಸಾಂತ್ವನ ಹೇಳಿ,ತನಿಖೆಗೆ ಆಗ್ರಹಿಸಿದ ಅಖಿಲೇಶ್ ವಿರುದ್ಧ ಬಿಜೆಪಿ ಕಿಡಿಕಾರಿದೆ.
2021ರಲ್ಲಿ ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ ಸಿಂಗ್ ಸಾವು ಕಂಡಾಗ ಇದೇ ಅಖಿಲೇಶ್ ಮನೆಗೆ ಭೇಟಿ ನೀಡುವುದು ಹೋಗಲಿ, ಕನಿಷ್ಠ ಸಾಂತ್ವನ ಕೂಡ ಹೇಳಿರಲಿಲ್ಲ ಎಂದು ಬಿಜೆಪಿ ಪ್ರಶ್ನೆ ಮಾಡಿದೆ. ಅಖಿಲೇಶ್ ಓಲೈಕೆ ರಾಜಕೀಯ ಅಲ್ಲದೇ ಮತ್ತೇನು ಎಂದು ಬಿಜೆಪಿ ಪ್ರಶ್ನೆ ಮಾಡಿದೆ. ಇತ್ತೀಚೆಗಷ್ಟೇ ಮುಖ್ತಾರ್ ಅನ್ಸಾರಿ ಮನೆಗೆ ಓವೈಸಿ ಕೂಡ ಭೇಟಿ ನೀಡಿದ್ದರು.
ಅನ್ಸಾರಿ ಶೋಕಿ ಒಂದಾ, ಎರಡಾ, ಇವ್ನು ಜೈಲಲ್ಲಿರುವಾಗಿ ಟಾಪ್ ಆಫೀಸರ್ಸ್ ಬಂದ್ ಬ್ಯಾಡ್ಮಿಂಟನ್ ಆಡ್ತಿದ್ರಂತೆ!
ಗಾಜಿಪುರಕ್ಕೆ ಭೇಟಿ ನೀಡಿದ ಅಖಿಲೇಶ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಅಖಿಲೇಶ್ ಭೇಟಿ ಹೆಸರಲ್ಲಿ ಯುಪಿಯಲ್ಲಿ ಜೋರು ರಾಜಕೀಯ ನಡೆಯುತ್ತಿದೆ. ಅಖಿಲೇಶ್ ಯಾದವರದ್ದು ಓಲೈಕೆ ರಾಜಕೀಯ ಎಂದ ಕೇಸರಿಪಡೆ ಟೀಕೆ ಮಾಡಿದೆ.