News Hour: 4 ವರ್ಗಗಳಿಗೆ ಬಜೆಟ್ ಜಾಕ್ಪಾಟ್, ತೆರಿಗೆದಾರರಿಗೆ ಸ್ವಲ್ಪ ರಿಲೀಫ್..!
ಮೋದಿ 3.0 ಬಜೆಟ್‌ನಲ್ಲಿ 4 ವರ್ಗಗಳಿಗೆ ಆದ್ಯತೆ ನೀಡಲಾಗಿದೆ. ಯುವಕರು,ಮಹಿಳೆಯರು, ರೈತರೇ ಟಾರ್ಗೆಟ್ ಆಗಿದ್ದಾರೆ. ಸರ್ವಾಂಗೀಣ ಅಭಿವೃದ್ಧಿಗೆ ಅಕ್ಷಯಪಾತ್ರೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ.
ಬೆಂಗಳೂರು (ಜು.23): ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದೆ. ಇದರಲ್ಲಿ 4 ವರ್ಗಗಳಿಗೆ ಆದ್ಯತೆ ನೀಡಲಾಗಿದ್ದು, ಯುವಕರು, ಮಹಿಳೆಯರು, ರೈತರೇ ಬಜೆಟ್‌ನಲ್ಲಿ ಟಾರ್ಗೆಟ್ ಆಗಿದ್ದಾರೆ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಇದು ಅಕ್ಷಯಪಾತ್ರೆ ಎಂದು ಮೋದಿ ಬಣ್ಣಿಸಿದ್ದಾರೆ.
ಆದಾಯ ತೆರಿಗೆದಾರರಿಗೆ ಕೇಂದ್ರ ಬಜೆಟ್‌ನಲ್ಲಿ ಕೊಂಚ ರಿಲೀಫ್ ನೀಡಲಾಗಿದೆ. 7 ಲಕ್ಷ ರೂ. ಆದಾಯ ಇದ್ದರೂ ಈಗ ತೆರಿಗೆ ಕಟ್ಟಬೇಕಿಲ್ಲ. ಇನ್ನು ತೆರಿಗೆ ಕಟ್ಟುವುದು ತಡವಾದರೂ ಶಿಕ್ಷೆಯಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ತಿಳಿಸಿದ್ದಾರೆ.
ಕೇಂದ್ರ ಬಜೆಟ್‌ಗೆ ಕಾಂಗ್ರೆಸ್ ನಾಯಕ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಸಂತಸ..!
ಎನ್ಡಿಎ ಮೈತ್ರಿಕೂಟದ ರಾಜ್ಯಗಳಿಗೆ ಜಾಕ್ಪಾಟ್ ದೊರೆತಿದೆ. ಆಂಧ್ರ ಪ್ರದೇಶ, ಬಿಹಾರಕ್ಕೆ ಯೋಜನೆಗಳ ಮಹಾಪೂರವಾಗಿದೆ. ಕುರ್ಚಿ ಬಚಾವೋ ಬಜೆಟ್ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.