Uttar Pradesh: 4,442 ಅಭ್ಯರ್ಥಿಗಳಲ್ಲಿ ಠೇವಣಿ ಕಳೆದುಕೊಂಡವರು 3522 ಮಂದಿ..!

ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲನುಭವಿಸಿದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ್ದ 399 ಸೀಟುಗಳ ಪೈಕಿ, 387 ಸೀಟುಗಳಲ್ಲಿ ಭದ್ರತಾ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತಿದೆ.

First Published Mar 13, 2022, 4:34 PM IST | Last Updated Mar 13, 2022, 5:47 PM IST

ಲಕ್ನೋ (ಮಾ. 12):  ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲನುಭವಿಸಿದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ್ದ 399 ಸೀಟುಗಳ ಪೈಕಿ, 387 ಸೀಟುಗಳಲ್ಲಿ ಭದ್ರತಾ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತಿದೆ. ಮಾಜಿ ಸಿಎಂ ಮಾಯಾವತಿ ಪಕ್ಷದ ಅಭ್ಯರ್ಥಿಗಳು 403 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 293 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದ್ದಾರೆ. ಅಚ್ಚರಿ ಎಂದರೆ ಬಿಜೆಪಿ ಸ್ಪರ್ಧಿಸಿದ್ದ 376 ಕ್ಷೇತ್ರಗಳ ಪೈಕಿ 3 ರಲ್ಲಿ ಠೇವಣಿ ಕಳೆದುಕೊಂಡಿದೆ. 

ಹಲವು ರೆಕಾರ್ಡ್ ಮಾಡಿದ ಯೋಗಿ, ಯುಪಿ ಚುನಾವಣೆಯಲ್ಲಿ ನಡೆದ ಹಲವು ಕುತೂಹಲಕಾರಿ ಘಟನೆಗಳು

 

Video Top Stories