Asianet Suvarna News Asianet Suvarna News

Yasin Malik Sentenced ಕಾಶ್ಮೀರ ಪಂಡಿತರಿಗಾದ ಅನ್ಯಾಯಕ್ಕೆ ತಕ್ಕಮಟ್ಟಿನ ನ್ಯಾಯ, ಉಗ್ರ ಯಾಸಿನ್‌ಗೆ ಜೀವಾವಧಿ ಶಿಕ್ಷೆ

  • ಕಾಶ್ಮೀರ ಉಗ್ರ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ
  • ಕಾಶ್ಮೀರ ಪಂಡಿತರ ಹತ್ಯಾಕಾಂಡದ ಹಿಂದಿನ ರೂವಾರಿ
  • ಕಾಶ್ಮೀರ ಪ್ರತ್ಯೇಕತವಾದಿ ಹೋರಾಟದ ನಾಯಕ ಮಲಿಕ್

ಭಯೋತ್ಪಾದನಾ ಚಟುವಟಿಕೆಗೆ ಹಣಕಾಸಿನ ನೆರವು ನೀಡಿದ ಪ್ರಕರಣ ಸೇರಿದಂತೆ 5 ಭಯೋತ್ಪದನಾ ಪ್ರಕರಣ ಸಂಬಂಧಿಸಿ ಕಾಶ್ಮೀರ ಉಗ್ರ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ. ದೆಹಲಿಯ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದೆ. ಗಲ್ಲು ಶಿಕ್ಷೆ ನೀಡಬೇಕು NIA ಒತ್ತಾಯಿಸಿತ್ತು. ಕಾಶ್ಮೀರ ಪಂಡಿತ ಹತ್ಯಾಕಾಂಡ, ಕಣಿವೆ ರಾಜ್ಯದಲ್ಲಿ ಅಮಾಕರ ಬಲಿ ಪಡೆದ ಕಾಶ್ಮೀರ ಪ್ರತ್ಯೇಕತಾವಾದಿಗೆ ಜೀವಾವಧಿ ಶಿಕ್ಷೆಯನ್ನು ಕಾಶ್ಮೀರ ಪಂಡಿತರು ಸ್ವಾಗತಿಸಿದ್ದಾರೆ. ಆದರೆ ಮಲಿಕ್‌ಗೆ ಗಲ್ಲು ಶಿಕ್ಷೆಯಾಗಬೇಕಿತ್ತು ಎಂದು ಬೇಸರ ತೋಡಿಕೊಂಡಿದ್ದಾರೆ.