
News Hour: ಕಣಿವೆಯಲ್ಲಿ ಹಿಂದೂಗಳ ಸಾಲು ಸಾಲು ಕೊಲೆ: ಟಾರ್ಗೆಟ್ ಕಿಲ್ಲಿಂಗ್ಸ್‌ಗೆ ತತ್ತರಿಸಿದ ಕಾಶ್ಮೀರ
Targeted killing in Kashmir: ಜಮ್ಮು ಮತ್ತು ಕಾಶ್ಮೀರದಲ್ಲಿ ಜನವರಿಯಿಂದ ಇಲ್ಲಿಯವರೆಗೂ 17 ಟಾರ್ಗೆಟ್ ಕಿಲ್ಲಿಂಗ್ಸ್ ನಡೆದಿವೆ.
ಶ್ರೀನಗರ (ಜೂ. 02): ಮತ್ತೆ ಕಣಿವೆ ನಾಡು ಕಾಶ್ಮೀರದಲ್ಲಿ ಭಯಾನಕ ಪರಿಸ್ಥಿತಿ ನಿರ್ಮಾಣವಾಗಿದೆ.ಇಷ್ಟು ವರ್ಷಗಳ ಬಳಿಕ, ಈಗ ಮತ್ತೆ ಕಾಶ್ಮೀರಿ ಪಂಡಿತರ ಜೀವಕ್ಕೆ ಸಂಚಕಾರ ಬಂದೆರಗಿದೆ. ಕಾಶ್ಮೀರದಲ್ಲಿ ಮತ್ತೆ ಹಿಂದು ನಾಗರಿಕರನ್ನು ಗುರುತಿಸಿ ಹತ್ಯೆಗೈಯುತ್ತಿರುವ ಬೆಳವಣಿಗೆಗಳು ಹೆಚ್ಚುತ್ತಿವೆ. ಹಿಂದೂಗಳನ್ನು ಗುರಿಯಾಗಿಸಿ ಹತ್ಯೆ ಮಾಡುವ ಪ್ರಕರಣಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂದುವರಿದಿದ್ದು, ಜನವರಿಯಿಂದ ಇಲ್ಲಿಯವರೆಗೂ 17 ಟಾರ್ಗೆಟ್ ಕಿಲ್ಲಿಂಗ್ಸ್ ನಡೆದಿವೆ.
ಇದನ್ನೂ ನೋಡಿ:ಕಣಿವೆಯಲ್ಲಿ ಹರಿಯುತ್ತಿದೆ ಹಿಂದೂಗಳ ರಕ್ತದ ಕೋಡಿ: ಕಾಶ್ಮೀರ್ ಫೈಲ್ಸ್ ರಿ ಓಪನ್?
ಈ ನಡುವೆ, ಪಂಡಿತರ ಆಗ್ರಹಕ್ಕೆ ಸರ್ಕಾರ ಸ್ಪಂದಿಸಿದೆ. ಕಾಶ್ಮೀರಿ ಹಿಂದೂ ಪಂಡಿತರು ವಾಸವಾಗಿರುವ ಕಾಲೋನಿಗಳನ್ನು ಪೊಲೀಸರು ಸೀಲ್ ಮಾಡಿದ್ದು, ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹಿಂದೂ ನಾಗರಿಕರ ಹತ್ಯೆಯ ಪ್ರಕರಣಗಳು ದಿನೇ ದಿನೇ ಏರುತ್ತಿರುವ ಹಿನ್ನೆಲೆಯಲ್ಲಿ ಜೀವಭಯದಿಂದಾಗಿ ಮಂಗಳವಾರದಿಂದ 100ಕ್ಕೂ ಹೆಚ್ಚು ಹಿಂದೂ ಕುಟುಂಬಗಳು ಕಾಶ್ಮೀರ ಕಣಿವೆಯನ್ನು ಬಿಟ್ಟು ವಲಸೆ ಹೋಗಿವೆ ಎಂಬ ವಿಷಯ ಬೆಳಕಿಗೆ ಬಂದಿದೆ.