Mekedatu Row: ನಮ್ಮ ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ನಿರ್ಣಯ, ಬೆಂಬಲ ಕೊಟ್ಟ ಬಿಜೆಪಿ

*ಕರ್ನಾಟಕದ ಮೇಕೆದಾಟು ಯೋಜನೆಗೆ ತಮಿಳುನಾಡು  ವಿರೋಧ
* ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ
* ಸರ್ಕಾರದ ನಿರ್ಧಾರ ಬೆಂಬಲಿಸಿದ ತಮಿಳುನಾಡು ಬಿಜೆಪಿ
* ಅನ್ಯಾಯವಾಗುತ್ತಿದೆ ಎಂದು ತಮಿಳುನಾಡು ಕ್ಯಾತೆ 

First Published Mar 21, 2022, 5:29 PM IST | Last Updated Mar 21, 2022, 5:30 PM IST

ಚೆನ್ನೈ(ಮಾ. 21)  ಮೇಕೆದಾಟು (Mekedatu) ಯೋಜನೆ  ವಿರುದ್ಧ ತಮಿಳುನಾಡು (Tamilnadu) ವಿಧಾನಸಭೆ ನಿರ್ಧಾರ ತೆಗೆದುಕೊಂಡಿದೆ. ತಮಿಳುನಾಡಿನ ನಿರ್ಧಾರವನ್ನು ಅಲ್ಲಿನ ಪಕ್ಷಗಳು ಸಮರ್ಥಿಸಿಕೊಂಡಿದ್ದು ಬಿಜೆಪಿ (BJP) ಸಹ ಬೆಂಬಲ ನೀಡಿದೆ. 

ಪ್ರಧಾನಿ ಬಳಿ ನಿಯೋಗ ಕೊಂಡೊಯ್ಯಲು ಕರ್ನಾಟಕ ತಿರ್ಮಾನ

ತಮಿಳುನಾಡು  ಬಿಜೆಪಿ ನಾಯಕ, ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದ ಅಣ್ಣಾ ಮಲೈ ಸಹ  ಈ ಹಿಂದೆ ಮೇಕೆದಾಟು ಯೋಜನೆಗೆ ನಮ್ಮ ವಿರೋಧ ಎಂದಿದ್ದರು. ಇನ್ನು ಮುಂದೆ ಈ ವಿಚಾರ ಯಾವ ತಿರುವು ಪಡೆದುಕೊಳ್ಳುತ್ತದೆ ಕಾದು ನೋಡಬೇಕು. ತಮಿಳುನಾಡು ವಿಧಾನಸಭೆಯಲ್ಲಿ ನಾಲ್ವರು ಬಿಜೆಪಿ ಸದಸ್ಯರಿದ್ದಾರೆ.