
ಡಿಎಂಕೆ ಗೆಟೌಟ್ ಮೋದಿ ಅಭಿಯಾನಕ್ಕೆ ಅಣ್ಣಾಮಲೈ ತಿರುಗೇಟು, ಹೊಸ ಅಲೆ ಶುರು
ಪ್ರಧಾನಿ ನರೇಂದ್ರ ಮೋದಿ ಕೆಣಕಿದ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಹಾಗೂ ಡಿಎಂಕೆಗೆ ಬಿಜೆಪಿ ತಮಿಳುನಾಡು ಅಧ್ಯಕ್ಷ ಅಣ್ಣಾಮಲೈ ತಿರುಗೇಟು ನೀಡಿದ್ದಾರೆ. ಇದೀಗ ಗೆಟೌಟ್ ಸ್ಟಾಲಿನ್ ಅಭಿಯಾನವನ್ನು ಬಿಜೆಪಿ ಆರಂಭಿಸಿದೆ.
ಚೆನ್ನೈ(ಫೆ.21) ಪ್ರಧಾನಿ ಮೋದಿ ಕೆಣಕಿದೆ ತಮಿಳುನಾಡು ಡಿಸಿಎಂ ಉದಯನಿಧಿಗೆ ಬಿಜೆಪಿ ತಿರುಗೇಟು ನೀಡಿದೆ. ಫೆ.19ರಂದು ಮೋದಿ ವಿರುದ್ಧ ಕಿಡಿ ಕಾರಿದ್ದ ಡಿಸಿಎಂ ಉದಯನಿಧಿ ಸ್ಟಾಲಿನ್, ಕೇಂದ್ರ ರಾಜ್ಯದ ಹಕ್ಕುಗಳನ್ನ ಕಸಿಯಲು ಯತ್ನಿಸುತ್ತಿದೆ . ‘ಆಗ ಗೋಬ್ಯಾಕ್ ಅಂದಿದ್ವಿ..ಈಗ ಗೆಟ್ಔಟ್ ಮೋದಿ ಅಂತೀವಿ ಎಂದಿದ್ದರು. ಬಳಿಕ ಡಿಎಂಕೆ, #GetOutModi ಟ್ರೆಂಡ್ ಆರಂಭಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಅಣ್ಣಾಮಲೈ, GetOutStalinಗೆ ಅಭಿಯಾನ ಆರಂಭಿಸಿದೆ.