ಮೋದಿ ಹೊಸ ಟೀಂ: ಸಂಪುಟ ಸರ್ಜರಿ ಹಿಂದಿದೆಯಾ ಇನ್ನೊಂದು ಲೆಕ್ಕಾಚಾರ?

13 ಲಾಯರ್ಸ್, 6 ಡಾಕ್ಟರ್ಸ್, ಐದು ಎಂಜಿನಿಯರ್ಸ್ ಹಾಗೂ ಏಳು ಮಂದಿ ಐಎಎಸ್‌ ಹಾಗೂ ಐಆರ್‌ಎಸ್‌. ಇಷ್ಟು ಜನ ಸೇರಿ ಈಗ ಮೋದಿ ಟೀಂಗೆ ಹೊಸ ಶಕ್ತಿ ಬಂದಾಯ್ತು. ಹೊಸದೊಂದು ಇಲಾಖೆ ಸೃಷ್ಟಿಸಿ ತಜ್ದರ ಹೊಸ ಟೀಂ ಕಟ್ಟಿದ ಮೋದಿ ಪ್ಲಾನ್‌ ಏನು ಗೊತ್ತಾ? 

First Published Jul 8, 2021, 5:22 PM IST | Last Updated Jul 8, 2021, 5:22 PM IST

ನವದೆಹಲಿ(ಜು.08) 13 ಲಾಯರ್ಸ್, 6 ಡಾಕ್ಟರ್ಸ್, ಐದು ಎಂಜಿನಿಯರ್ಸ್ ಹಾಗೂ ಏಳು ಮಂದಿ ಐಎಎಸ್‌ ಹಾಗೂ ಐಆರ್‌ಎಸ್‌. ಇಷ್ಟು ಜನ ಸೇರಿ ಈಗ ಮೋದಿ ಟೀಂಗೆ ಹೊಸ ಶಕ್ತಿ ಬಂದಾಯ್ತು. ಹೊಸದೊಂದು ಇಲಾಖೆ ಸೃಷ್ಟಿಸಿ ತಜ್ದರ ಹೊಸ ಟೀಂ ಕಟ್ಟಿದ ಮೋದಿ ಪ್ಲಾನ್‌ ಏನು ಗೊತ್ತಾ? 

ಹೌದು ಬಹುನಿರೀಕ್ಷಿತ ಕೇಂದ್ರ ಮಂತ್ರಿ ಮಂಡಲದ ವಿಸ್ತರಣೆ ಮತ್ತು ಪುನಾರಚನೆ ಬುಧವಾರ ಭರ್ಜರಿಯಾಗಿಯೇ ನೆರವೇರಿದೆ. 2019ರಲ್ಲಿ 2ನೇ ಬಾರಿ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ತಮ್ಮ ಮಂತ್ರಿ ಮಂಡಲಕ್ಕೆ ಭರ್ಜರಿ ಸರ್ಜರಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, 43 ನೂತನ ಸಚಿವರನ್ನು ತಮ್ಮ ಮಂತ್ರಿ ಬಳಗಕ್ಕೆ ಸೇರಿಸಿಕೊಂಡಿದ್ದಾರೆ.

ಈ ಪೈಕಿ 36 ಜನರು ಹೊಸದಾಗಿ ಸಂಪುಟ ಸೇರಿದ್ದರೆ, 7 ಸಚಿವರಿಗೆ ಪದನ್ನೋತಿ ನೀಡಲಾಗಿದೆ. ಈ ಪುನಾರಚನೆ ವೇಳೆ ಕರ್ನಾಟಕದ ಒಬ್ಬ ಸಚಿವರನ್ನು ಕೈಬಿಟ್ಟು, ಹೊಸದಾಗಿ ನಾಲ್ವರಿಗೆ ಅವಕಾಶ ಮಾಡಿಕೊಡುವ ಮೂಲಕ, 25 ಸಂಸದರನ್ನು ಆರಿಸಿ ಕಳಿಸಿದ ಕರ್ನಾಟಕಕ್ಕೆ ಬಂಪರ್‌ ಕೊಡುಗೆ ನೀಡಲಾಗಿದೆ.