
Suvarna Focus: ಜಗತ್ತನ್ನೇ ನಿಬ್ಬೆರಗಾಗಿಸಿದ ಅಂತರಿಕ್ಷ ಮಹಾಸಾಹಸ! ಭೂಮಂಡಲದ ಭವಿಷ್ಯ ಬದಲಿಸುತ್ತಾ ಆಕ್ಸಿಯೋಮ್-4?
ಭಾರತದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಆಕ್ಸಿಯೋಮ್-4 ಮಿಷನ್‌ನಲ್ಲಿ ಅಂತರಿಕ್ಷಕ್ಕೆ ಪಯಣಿಸಿದ್ದಾರೆ. ಈ ಮಿಷನ್ ಬಾಹ್ಯಾಕಾಶದಲ್ಲಿ ಮಾನವ ಬದುಕಿನ ಸಾಧ್ಯತೆಗಳನ್ನು ಪರಿಶೀಲಿಸುವ ಗುರಿ ಹೊಂದಿದೆ. ಶುಕ್ಲಾ ಅವರ ಈ ಸಾಧನೆ ಭಾರತಕ್ಕೆ ಹೆಮ್ಮೆಯ ಕ್ಷಣ.
ಬೆಂಗಳೂರು (ಜೂ.26): ಬಹುನಿರೀಕ್ಷಿತ ಆಕ್ಸಿಯೋಮ್-4, ಮಿಷನ್‌ನ ಯಶಸ್ವಿಯಾಗಿ ಉಡಾವಣೆಯಾಗಿದೆ. ಇದನ್ನ ಮಾಡಿದ್ದೇನೋ, ನಾಸಾ. ಆದರೆ, ನಾಸಾಗಿಂತಾ ದೊಡ್ಡ ಮಟ್ಟದಲ್ಲಿ ಸಂಭ್ರಮಿಸ್ತಾ ಇರೋದು ಮಾತ್ರ, ಭಾರತ.ಭಾರತದ ಪಾಲಿಗೆ ಈ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸೃಷ್ಟಿಸಿದ ಹಾಗೆ.
ಅದಕ್ಕೆ ಕಾರಣವೇನು ಗೊತ್ತಾ, ನಮ್ಮ ಭಾರತದ ವೀರಪುತ್ರ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಕೂಡ ನಭೋಮಂಡಲದ ಎತ್ತರ ಮುಟ್ಟಿದ್ದಾರೆ.. ಈ ಮೂಲಕ, ಕೋಟ್ಯಂತರ ಭಾರತೀಯರ ಕನಸುಗಳಿಗೆ ರೆಕ್ಕೆಪುಕ್ಕಕೊಟ್ಟಿದ್ದಾರೆ. ಅಷ್ಟಕ್ಕೂ ಏನಿದು ಆಕ್ಸಿಯೋಮ್-4 ಮಿಷನ್? ಏನಿದರ ಉದ್ದೇಶ?
ಮನುಷ್ಯನ ಕನಸು, ಬಾಹ್ಯಾಕಾಶದಲ್ಲಿ ಬದುಕು ಕಟ್ಟಿಕೊಳ್ಳೋದು.. ಆ ಕನಸು ನನಸಾಗೋ ಸಾಧ್ಯೆ ಎಷ್ಟಿದೆ ಅನ್ನೋದನ್ನ ಪತ್ತೆ ಹಚ್ಚೋಕೆ, ಶುಭಾಂಶು ಶುಕ್ಲಾ ಅಂತರಿಕ್ಷಕ್ಕೆ ಹಾರಿದ್ದಾರೆ. ಶುಭಾಂಶು ಶುಕ್ಲಾ ಈಗ ಹೊಸ ಚರಿತ್ರೆ ಸೃಷ್ಟಿಸಿದ್ದಾರೆ. ಈ ಕ್ಷಣದಿಂದ ಅವರ ಬದುಕಿನ ಒಂದೊಂದು ಕ್ಷಣವೂ ಹೊಸ ಮೈಲಿಗಲ್ಲು. ಅದರ ನೇರಪ್ರಯೋಜನ, ಅದರ ಫಲ ದೊರೆಯೋದು ನಮಗೆ.