Asianet Suvarna News Asianet Suvarna News

Jahangirpuri: ಗಲಭೆಕೋರರ ಅಕ್ರಮ ಕಟ್ಟಡ ತೆರವಿಗೆ ಸುಪ್ರೀಂ ತಡೆ!

ಶನಿವಾರ ಹನುಮ ಜಯಂತಿ ಮೆರವಣೆಗೆ ನಡೆದ ಕೋಮು ಘರ್ಷಣೆಯ ನಂತರ ಉದ್ವಿಗ್ನಗೊಂಡ ದೆಹಲಿಯ ಜಹಾಂಗೀರಪುರಿಯಲ್ಲಿ ದೆಹಲಿ ಮುನ್ಸಿಪಲ್ನ ನಡೆಸುತ್ತಿದ್ದ ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆಗೆ  ಇಂದು ಸುಪ್ರೀಂ ಕೋರ್ಟ್ ತಡೆ ನೀಡಿದೆ. 

First Published Apr 20, 2022, 5:22 PM IST | Last Updated Apr 20, 2022, 5:22 PM IST

ನವದೆಹಲಿ(ಏ.20): ದೆಹಲಿಯ ಜಹಾಂಗೀರಪುರಿಯಲ್ಲಿ ದೆಹಲಿ ಮುನ್ಸಿಪಲ್  ನಡೆಸುತ್ತಿದ್ದ ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆಗೆ  ಇಂದು ಸುಪ್ರೀಂ ಕೋರ್ಟ್ ತಡೆ ನೀಡಿದೆ.

ಘರ್ಷಣೆಯ ಕೇಂದ್ರದಲ್ಲಿದ ಮಸೀದಿ ಕಟ್ಟಡಗಳನ್ನು ನೆಲಸಮ ಮಾಡುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠವು ಆದೇಶಿಸಿದ್ದು,  ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿತು. ಇದಾದ ಬಳಿಕ ಈ ಕಾರ್ಯಾಚರಣೆ ಕೈ ಬಿಡಲಾಗಿದೆ.