
ಸಿಎಂ ಯೋಗಿ ಆದಿತ್ಯನಾಥ್ ಪಾದಮುಟ್ಟಿ ನಮಸ್ಕರಿಸಿದ ರಜನಿಕಾಂತ್, ವಿಡಿಯೋ ವೈರಲ್!
ಜೈಲರ್ ಚಿತ್ರದ ಯಶಸ್ಸಿನಲ್ಲಿರುವ ಸೂಪರ್ ಸ್ಟಾರ್ ರಜನಿಕಾಂತ್ ಇಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿಯಾಗಿದ್ದಾರೆ. ಈ ವೇಳೆ ರಜನಿಕಾಂತ್ , ಸಿಎಂ ಯೋಗಿ ಪಾದ ಮುಟ್ಟಿ ನಮಸ್ಕರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇನ್ನು ಕರ್ನಾಟಕದಲ್ಲಿ ಬಿಜೆಪಿ ಅಲರ್ಟ, ಕಾಂಗ್ರೆಸ್ ಆಪರೇಶನ್ ಹಸ್ತ ಸೇರಿದಂತೆ ಇಂದಿನ ಇಡೀ ದಿನದ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಲಖನೌ(ಆ.19) ಜೈಲರ್ ಚಿತ್ರ ದೇಶಾದ್ಯಂತ ಭರ್ಜರಿ ಯಶಸ್ಸು ಕಂಡಿದೆ. ಸೂಪರ್ ಸ್ಟಾರ್ ರಜನಿಕಾಂತ್ ಮತ್ತೆ ತೆರೆ ಮೇಲೆ ಅಬ್ಬರಿಸಿದ್ದಾರೆ. ಇದೀಗ ಯಶಸ್ಸಿನ ಅಲೆಯಲ್ಲಿರುವ ರಜನಿಕಾಂತ್ ಇಂದು ಲಖನೌದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿಯಾಗಿದ್ದಾರೆ. ಈ ವೇಳೆ ರಜನಿಕಾಂತ್, ಸಿಎಂ ಯೋಗಿ ಪಾದ ಮುಟ್ಟಿ ನಮಸ್ಕರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ರಜನಿಕಾಂತ್‌ಗೆ ಆತ್ಮೀಯ ಸ್ವಾಗತ ನೀಡಿದ ಯೋಗಿ ಆದಿತ್ಯನಾಥ್, ಮಾತುಕತೆ ನಡೆಸಿದ್ದಾರೆ. ಬಳಿಕ ರಜನಿಕಾಂತ್‌ಗೆ ಪುಸ್ತಕ ಸೇರಿದಂತೆ ಎರಡು ಉಡುಗೊರೆ ನೀಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ