ಭಾರತ ಅತೀ ಉದ್ದದ ಸರಕು ಸಾಗಾಣೆ ರೈಲು, ಬರೋಬ್ಬರಿ 295 ವ್ಯಾಗನ್ ಮೂಲಕ ದಾಖಲೆ!
ಅತೀ ಉದ್ದನೆ, ಅತೀ ಹೆಚ್ಚು ಸಾಮರ್ಥ್ಯದ ರೈಲಿನಲ್ಲಿ ಇದೀಗ ಕಲ್ಲಿದ್ದಲ್ಲು ಸಾಗಿಸುವ ಮೂಲಕಭಾರತ ಹೊಸ ದಾಖಲೆ ಬರೆಯಲಾಗಿದೆ.
ಇದು ಸೂಪರ್ ವಾಸುಕಿ ರೈಲು. ದೇಶದ ಅತೀ ಉದ್ದನೆಯ ಸರಕು ಸಾಗಾಣೆ ರೈಲಾಗಿದೆ. ಇತರ ಸರಕು ಸಾಗಾಣೆ ರೈಲಿಗೆ ಹೋಲಿಸಿದರೆ ಮೂರು ಪಟ್ಟ ಹೆಚ್ಚು ಸಾಮರ್ಥ್ಯ ಹೊಂದಿದ ರೈಲು ಇದಾಗಿದೆ. ಬರೋಬ್ಬರಿ 295 ವ್ಯಾಗನ್ ಮೂಲಕ ಕಲ್ಲಿದ್ದಲ್ಲು ಸಾಗಿಸಲಾಗಿದೆ. ಸೂಪರ್ ವಾಸುಕಿ ಒಂದು ಪ್ರಯಾಣದಲ್ಲಿ ಸುಮಾರು 9,000 ಟನ್ ಕಲ್ಲಿದ್ದಲ್ಲು ಸಾಗಿಸುತ್ತದೆ. ಒಂದೇ ಬಾರಿ ಒಂದು ಭಾಗದ ಕಲ್ಲಿದ್ದಲ್ಲು ಸಮಸ್ಯೆಯನ್ನು ನೀಗಿಸುವ ಸಾಮರ್ಥ್ಯ ಈ ರೈಲಿಗಿದೆ. ಅತೀ ಉದ್ದನೆ, ಅತೀ ಹೆಚ್ಚು ಸಾಮರ್ಥ್ಯದ ರೈಲಿನಲ್ಲಿ ಇದೀಗ ಕಲ್ಲಿದ್ದಲ್ಲು ಸಾಗಿಸುವ ಮೂಲಕ ಹೊಸ ದಾಖಲೆ ಬರೆಯಲಾಗಿದೆ.