
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ರೋಚಕ ಸ್ಟೋರಿಗಳಿವು
ವೀಲಿಂಗ್ ಮಾಡಲು ಹೋಗಿ ಮುಗ್ಗರಿಸಿ ಬಿದ್ದ ಯುವಕ
ಸಾಯಲು ಹೊರಟವನ ಪ್ರಾಣ ಉಳಿಸಿದ ರೈಲ್ವೆ ಸಿಬ್ಬಂದಿ
ಬೆಂಗಳೂರು(ಜ.6) ಜಗತ್ತಿನಲ್ಲಿ ಏನೇನೋ ವಿಚಿತ್ರಗಳು, ಅನಾಹುತಗಳು ನಡೆಯುತ್ತಲ್ಲೇ ಇರುತ್ತವೆ. ಆದರೆ ಇತ್ತೀಚೆಗೆ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್ ಇರುವುದರಿಂದ ಇವು ವೈರಲ್ ಆಗುತ್ತಿವೆ. ಹೀಗೆ ವೈರಲ್ ಆದ ಕೆಲವು ರೋಚಕ ಸ್ಟೋರಿಗಳ ವಿವರ ಇಲ್ಲಿದೆ ನೋಡಿ...
ಬೈಕ್ ವೀಲಿಂಗ್ ಸೋಕಿಗೆ ಬಿದ್ದ ಯುವಕರಿಬ್ಬರು ವ್ಹೀಲಿಂಗ್ ಮಾಡಲು ಹೋಗಿ ನೋಡ ನೋಡುತ್ತಿದ್ದಂತೆ ರಸ್ತೆಯಿಂದ ಗದ್ದೆಗೆ ಬಿದ್ದಿದ್ದಾರೆ. ಈ ವೇಳೆ ಬೈಕ್ ಹಿಂದೆ ಕುಳಿತಿದ್ದ ಯುವಕ ಕೆಳಗೆ ಬಿದ್ದಿದ್ದಾನೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬೈಕ್‌ನಲ್ಲಿ ತೆರಳುತ್ತಿದ್ದ ಮೂರು ಜನರಿದ್ದ ಪುಟ್ಟ ಕುಟುಂಬವೊಂದಕ್ಕೆ ಎತ್ತಲಿಂದಲೋ ಬಂದ ಮದವೇರಿದ್ದ ಗೂಳಿಯೊಂದು ಗುದ್ದಿದ್ದು, ಗೂಳಿ ಗುದ್ದಿದ್ದ ರಭಸಕ್ಕೆ ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ರಸ್ತೆಗೆ ಬಿದ್ದಿದ್ದಾರೆ. ಈ ಭಯನಾಕ ವಿಡಿಯೋ ನೋಡುಗರ ಎದೆ ಝಲ್ ಎನಿಸುವಂತಿದೆ. ತಮಿಳುನಾಡಿನ ಕನ್ನಮಂಗಲಂನಲ್ಲಿ ಈ ಘಟನೆ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೊಬ್ಬ ರೈಲು ಬರುವುದನ್ನೇ ಕಾದು ರೈಲು ಬರುತ್ತಿದ್ದಂತೆ ಹಳಿಯ ಮೇಲೆ ಮಲಗಿದ್ದಾನೆ. ಆದರೆ ಆತನ ಅದೃಷ್ಟ ಚೆನ್ನಾಗಿತ್ತೇನೋ ಇದನ್ನು ನೋಡಿದ ರೈಲಿನ ಲೋಕೋಪೈಲೆಟ್ ಕೂಡಲೇ ರೈಲಿನ ತುರ್ತು ಬ್ರೇಕ್ ಎಳೆದು ರೈಲು ನಿಲ್ಲಿಸಿದ್ದಾರೆ. ನಂತರ ರೈಲ್ವೆ ಸಿಬ್ಬಂದಿ ಬಂದು ಈತನನ್ನು ಎಬ್ಬಿಸಿ ರಕ್ಷಿಸಿದ್ದಾರೆ. ಮುಂಬೈನ ಶಿವ್ಡಿ ರೈಲು ನಿಲ್ದಾಣದ ಸಮೀಪ ಈ ಘಡನೆ ನಡೆದಿತ್ತು.
ಇನ್ನು ತಮಿಳುನಾಡಿನಲ್ಲಿ ಕುಟುಂಬವೊಂದು ಎರಡು ಸಾಕು ಬೆಕ್ಕುಗಳಿಗೆ ಸೀಮಂತ ಮಾಡಿದ ವಿಚಿತ್ರ ಘಟನೆ ನಡೆದಿತ್ತು. ಇದು ಅಲ್ಲದೇ ನಮ್ಮ ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಕೆಟ್ಟು ನಿಂತಿದ್ದ ಪ್ರವಾಸಿಗರಿದ್ದ ಕ್ಸೈಲೋ ಮಹೀಂದ್ರಾ ಸಫಾರಿ ವಾಹನವನ್ನು ಹುಲಿಯೊಂದು ಹಿಂದಿನಿಂದ ಎಳೆದ ರೋಚಕ ವಿಡಿಯೋ ಕೂಡ ಈ ವಾರ ಭಾರಿ ವೈರಲ್ ಆಗಿತ್ತು.