Asianet Suvarna News Asianet Suvarna News

ದೇಶದಲ್ಲಿ ಕೊರೊನಾ 2 ನೇ ಅಲೆ ಭೀತಿ, ಕಂಟಕವಾಗುತ್ತಾ ಬ್ರೆಜಿಲ್, ಆಫ್ರಿಕಾ ವೈರಸ್.?

ಭಾರತವನ್ನು ಕೊರೊನಾ ಮುಕ್ತಗೊಳಿಸಲು ಸಫಲವಾಗಿರುವ ಹೊತ್ತಿನಲ್ಲಿ, ಇದೇ ಮೊದಲ ಬಾರಿಗೆ ಭಾರತದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ ಮಾದರಿ ರೂಪಾಂತರಿ ಕೊರೋನಾ ವೈರಸ್‌ ಪತ್ತೆಯಾಗಿದೆ.

Feb 18, 2021, 5:04 PM IST

ಬೆಂಗಳೂರು (ಫೆ. 18): ಭಾರತವನ್ನು ಕೊರೊನಾ ಮುಕ್ತಗೊಳಿಸಲು ಸಫಲವಾಗಿರುವ ಹೊತ್ತಿನಲ್ಲಿ, ಇದೇ ಮೊದಲ ಬಾರಿಗೆ ಭಾರತದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ ಮಾದರಿ ರೂಪಾಂತರಿ ಕೊರೋನಾ ವೈರಸ್‌ ಪತ್ತೆಯಾಗಿದೆ.

ಕಳೆದ 2 ತಿಂಗಳ ಅವಧಿಯಲ್ಲಿ ವಿದೇಶದಿಂದ ಭಾರತಕ್ಕೆ ಆಗಮಿಸಿದವರ ಪೈಕಿ ನಾಲ್ವರಲ್ಲಿ ಆಫ್ರಿಕಾ ಮಾದರಿ ಮತ್ತು ಒಬ್ಬರಲ್ಲಿ ಬ್ರೆಜಿಲ್‌ ಮಾದರಿ ವೈರಸ್‌ ಪತ್ತೆಯಾಗಿರುವುದು ಆತಂಕ ಮೂಡಿಸಿದೆ. 5 ಜನರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಜೊತೆಗೆ ಅವರ ಸಂಪರ್ಕಕ್ಕೆ ಬಂದವರನ್ನು ಕೂಡಾ ತಪಾಸಣೆಗೆ ಒಳಪಡಿಸಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.