
ರಂಜಾನ್ ಹೆಸರಲ್ಲಿ ಹಣ ಸಂಗ್ರಹಿಸಿ ಭಾರತದಲ್ಲಿ ಭಯೋತ್ಪಾದಕ ಕೃತ್ಯ, SDPI ರಾಷ್ಟ್ರೀಯ ಅಧ್ಯಕ್ಷ ಅರೆಸ್ಟ್
ಗಲ್ಫ್ ರಾಷ್ಟ್ರಗಳಲ್ಲಿ ಭಾರತದ ರಾಜಕೀಯ ಪಕ್ಷ, ನಿಷೇಧಿತ ಪಿಎಫ್ಐ ಸಂಘಟನೆಯನ್ನು ಇನ್ನೊಂದು ಮುಖ ಎಸ್‌ಡಿಪಿಐ ಹಣ ಸಂಗ್ರಹಿಸಿದೆ. ಈ ಹಣವನ್ನು ಭಾರತದಲ್ಲಿ ಭಯೋತ್ಪಾದಕ ಚಟುವಟಿಗೆಳಿಗೆ ಬಳಸಿಕೊಳ್ಳುತ್ತಿರುವ ಆರೋಪದಡಿ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂಕz ಫೈಜಿಯನ್ನು ಇಡಿ ಬಂಧಿಸಿದೆ. ಅಷ್ಟಕ್ಕೂ ಎಂಕ ಫೈಜಿಯ ಸ್ಫೋಟಕ ಹಿಸ್ಟರಿ ಬಯಲಾಗಿದೆ.
ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮತ್ತೊಂದು ಮುಖ SDPI ರಾಷ್ಟ್ರೀಯ ಪಕ್ಷ. ಇದೀಗ SDPI ರಾಷ್ಟ್ರೀಯ ಅಧ್ಯಕ್ಷ ಎಂಕೆ ಫೈಜ್‌ನನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಹವಾಲ ಹಣದ ವ್ಯವಹಾರ, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಹಯೋಗದಲ್ಲಿ ದೇಶ ವಿರೋಧಿ ಚಟುವಟಿಕೆ ಹಾಗೂ ಭಾರತದಲ್ಲಿ ಭಯೋತ್ಪಾದ ಕತ್ಯಗಳಿಗೆ ಹಣ ಸಂಗ್ರಹಿಸುತ್ತಿದ್ದ ಆರೋಪದಡಿ ಇಡಿ ಅಧಿಕಾರಿಗಳು ಎಂಕೆ ಫೈಜಿ ಅಲಿಯಾಸ್ ಮೊಯಿದ್ದೀನ್ ಕುಟ್ಟಿಯನ್ನು ಬಂಧಿಸಲಾಗಿದೆ. ಎಂಕೆ ಫೈಜಿ ಕಸ್ಟಡಿಗೆ ಪಡೆದ ಇಡಿ ಅಧಿಕಾರಿಗಳು ಬಳಿಕ ದೆಹಲಿಗೆ ಕರೆತಂದು ಪಟಿಯಾಲ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಇದೀಗ 6 ದಿನಗಳ ಕಾಲ ಇಡಿ ಕಸ್ಟಡಿಗೆ ಪಡೆದಿದ್ದಾರೆ. ಅಷ್ಟಕ್ಕೂ ಎಂಕೆ ಫೈಜಿ ಪಕ್ಷದ ಹೆಸರಿನಲ್ಲಿ ನಡೆಸುತ್ತಿದ್ದ ದೇಶ ವಿರೋಧಿ ಚಟುವಟಿಕೆ ಏನು ಗೊತ್ತಾ? 20247ರ ಒಳಗೆ ಭಾರತವನ್ನು ಇಸ್ಲಾಮ್ ರಾಷ್ಯ್ರ ಮಾಡಲು ಎಂಕೆ ಫೈಜಿ ಸೇರಿ ರಾಜಕೀಯ ಪಕ್ಷ ಎಸ್‌ಡಿಪಿಐ ಮಾಡಿದ ಸಂಚೇನು?