ಮಾಡೋದೆಲ್ಲಾ ಕುತಂತ್ರ; ಭಾರತೀಯರ ಪುಣ್ಯಕ್ಷೇತ್ರದ ಬಳಿ ಚೀನಾ ಯುದ್ಧಕ್ಕೆ ತಯಾರಿ
ಗಡಿಯಲ್ಲಿ ಭಾರತದ ವಿರುದ್ಧ ಜಿದ್ದು ಸಾಧಿಸುತ್ತಿರುವ ಚೀನಾ ಇದೀಗ ಭಾರತೀಯರ ಪುಣ್ಯ ಕ್ಷೇತ್ರವಾಗಿರುವ ಮಾನಸ ಸರೋವರದ ಬಳಿಯಲ್ಲಿ ಅತ್ಯಾಧುನಿಕ ಕ್ಷಿಪಣಿ ಉಡಾವಣಾ ನೆಲೆ ಸ್ಥಾಪಿಸುತ್ತಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ನವದೆಹಲಿ (ಆ. 23): ಗಡಿಯಲ್ಲಿ ಭಾರತದ ವಿರುದ್ಧ ಜಿದ್ದು ಸಾಧಿಸುತ್ತಿರುವ ಚೀನಾ ಇದೀಗ ಭಾರತೀಯರ ಪುಣ್ಯ ಕ್ಷೇತ್ರವಾಗಿರುವ ಮಾನಸ ಸರೋವರದ ಬಳಿಯಲ್ಲಿ ಅತ್ಯಾಧುನಿಕ ಕ್ಷಿಪಣಿ ಉಡಾವಣಾ ನೆಲೆ ಸ್ಥಾಪಿಸುತ್ತಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಭಾರತ ಕೂಡ ಇತ್ತೀಚೆಗಷ್ಟೇ ಪೂರ್ವ ಲಡಾಖ್‌ನಲ್ಲಿ ಸ್ಯಾಮ್ ನೆಲೆ ಸ್ಥಾಪಿಸಿತ್ತು. ವಾಯುದಾಳಿ ನಡೆದರೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಲು ಈ ರೀತಿಯ ಕ್ಷಿಪಣಿ ನೆಲೆಗಳು ಗಡಿಯ ಬಳಿ ಇದ್ದರೆ ಅನುಕೂಲವಾಗುತ್ತದೆ. ಚೀನಾ ಈಗಾಗಲೇ ಪ್ಯಾಂಗಾಂಗ್ ಸರೋವರದ ಬಳಿ ಟಿಬೆಟ್‌ನ ಒಳಗೆ ಒಂದು ಕಡೆ ಹಾಗೂ ಟಿಬೆಟ್‌ನ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ಸ್ಯಾಮ್ ಕ್ಷಿಪಣಿ ಉಡಾವಣಾ ವ್ಯವಸ್ಥೆ ಅಳವಡಿಸಿದೆ. ಇದೀಗ ಐದನೇ ಸ್ಯಾಮ್ ನೆಲೆ ಸ್ಥಾಪಿಸುತ್ತಿದೆ. ಚೀನಾ ಈಗಾಗಲೇ ಟಿಬೆಟ್‌ನಲ್ಲಿ ಸುರಂಗಗಳ ಒಳಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕೂಡ ತಂದು ಜಮಾವಣೆ ಮಾಡಿದೆ ಎಂದು ಹೇಳಲಾಗಿದೆ.